ಮುಳ್ಳೂರು, ಮೇ ೧೨: ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ವಿದ್ಯಾವಂತರಿಗೆ ಮಾಡಿಕೊಟ್ಟಿರುವ ಅವಕಾಶದಿಂದ ನಾವಿಂದು ಸಮಾಜದಲ್ಲಿ ಗೌರವ ಸಂಪಾದಿಸುತ್ತಿದ್ದೇವೆ ಎಂದು ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಅಭಿಪ್ರಾಯಪಟ್ಟರು.

ಸಮೀಪದ ಮಾದ್ರೆ ಗ್ರಾಮದ ಡಾ.ಭೀಮ್‌ರಾವ್ ಯುವಕ ಸಂಘ ಹಾಗೂ ಗ್ರಾಮಾಭಿವೃದ್ದಿ ಸಮಿತಿ ವತಿಯಿಂದ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮ ಸಮಾಜದ ನಿರ್ಮಾಣಕ್ಕಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂವಿಧಾನದಲ್ಲಿ ಮಾಡಿಕೊಟ್ಟಿರುವ ಅವಕಾಶದಲ್ಲಿ ಸ್ಥಾನಮಾನ, ಹುದ್ದೆ, ಅಧಿಕಾರ ಒಂದು ಭಾಗವಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಮತ್ತೊಂದು ಭಾಗವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಶಿಕ್ಷಣದಿಂದ ಮಾತ್ರ ಸಮಾಜವನ್ನು ಬದಲಾಯಿಸಬಹುದು ಎಂದು ಹೇಳಿದರು. ಮಾಜಿ ತಾ.ಪಂ.ಸದಸ್ಯ ಜೆ.ಆರ್.ಪಾಲಾಕ್ಷ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಜನಾರ್ಧನ್ ಮಾತನಾಡಿದರು ವೇದಿಕೆಯಲ್ಲಿ ದುಂಡಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ಬಾಸ್, ಮಾದ್ರೆ ಜಯ್ ಭೀಮ್ ರಾವ್ ಯುವಕ ಸಂಘದ ಅಧ್ಯಕ್ಷ ಎಂ.ಕೆ.ಮAಜುನಾಥ್, ಜಯಪ್ಪ ಹಾನಗಲ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ಎಸ್.ವೀರೇAದ್ರ ಮುಂತಾದವರು ಇದ್ದರು.