ಪೊನ್ನಂಪೇಟೆ, ಮೇ ೧೨: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪುತ್ತಾಮನೆ ಪೂಜಾ ಶರಣು, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಸುಪ್ರಿಯಾ, ಸೋಮವಾರಪೇಟೆ ಬಿಟಿಸಿಜಿ ಕಾಲೇಜು ಉಪನ್ಯಾಸಕಿ ಸುನಿತಾ ಅವರು ಮಂಗಳೂರು ಮತ್ತು ಕೊಡಗು ವಿಶ್ವವಿದ್ಯಾಲಯದ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಸಿದ್ದಪಡಿಸಿರುವ ‘ಸಾಂಸ್ಥಿಕ ನಡವಳಿಕೆಯ ಮೂಲಭೂತ ಅಂಶಗಳು' ಎಂಬ ಪುಸ್ತಕವನ್ನು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಬಿಡುಗಡೆ ಗೊಳಿಸಿದರು.
ಈ ಸಂದರ್ಭ ಹಿರಿಯ ಉಪನ್ಯಾಸಕಿ ಸಿ.ಪಿ. ಸುಜಯ, ಪ್ರೊ. ಆರ್. ತಿಪ್ಪೇಸ್ವಾಮಿ, ವಾಣಿಜ್ಯ ಶಾಸ್ತç ವಿಭಾಗ ಮುಖ್ಯಸ್ಥೆ ಡಾ. ನಯನಾ ತಮ್ಮಯ್ಯ, ಉಪನ್ಯಾಸಕರಾದ ಪ್ರಕಾಶ್ ನಾಟಿಕಾರ್, ನಿತ್ಯ, ಪೊನ್ನಮ್ಮ ಇದ್ದರು.