ಪೊನ್ನಂಪೇಟೆ, ಮೇ ೧೨: ತಾ. ೧೪ ರಿಂದ ೧೬ ರವರೆಗೆ ದಕ್ಷಿಣ ಕೊಡಗು ಒಕ್ಕಲಿಗರ ವೇದಿಕೆ ವತಿಯಿಂದ ಒಕ್ಕಲಿಗರ ಕ್ರೀಡಾ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದ್ದು, ವೇದಿಕೆಯ ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಅಜಿತ್, ಕಾರ್ಯದರ್ಶಿ ಲವ, ಗೌರವ ಅಧ್ಯಕ್ಷ ಡಾಲು, ಖಜಾಂಚಿ ಕಿರಣ್, ಕ್ರೀಡಾ ಸಂಚಾಲಕರಾದ ನಿಖಿಲ್, ಜಗದೀಶ್, ಸಹ ಕಾರ್ಯದರ್ಶಿ ಮನು, ನಿರ್ದೇಶಕ ಶ್ರೇಯಸ್ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ ಮಾಡಿದರು.
ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಒಕ್ಕಲಿಗರ ಕ್ರೀಡಾ ಮಿಲನದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗರು ಭಾಗವಹಿಸಲಿದ್ದಾರೆ.
ಪುರುಷರಿಗೆ ಲೀಗ್ ಮಾದರಿಯ ಕ್ರಿಕೆಟ್, ಹಗ್ಗಜಗ್ಗಾಟ ಸ್ಪರ್ಧೆ, ಬಾಂಬ್ ಇನ್ ದ ಸಿಟಿ, ಭಾರದ ಗುಂಡು ಎಸೆತ, ಮಹಿಳೆಯರಿಗೆ ಹಗ್ಗಜಗ್ಗಾಟ, ಥ್ರೋಬಾಲ್, ಬೆಂಕಿ ರಹಿತ ಅಡುಗೆ, ರಂಗೋಲಿ ಸ್ಪರ್ಧೆ ನಡೆಯಲಿದೆ. ಅಲ್ಲದೇ ಕಪಲ್ ಡ್ಯಾನ್ಸ್, ಮೂರು ಕಾಲಿನ ಓಟ, ವೆಜಿಟೇಬಲ್ ಕಾರ್ವಿಂಗ್ ಸ್ಪರ್ಧೆ ನಡೆಯಲಿದೆ. ೧೬ ವರ್ಷದ ಒಳಗಿನ ಮಕ್ಕಳಿಗೆ ಕ್ರಿಕೆಟ್, ಓಟದ ಸ್ಪರ್ಧೆ, ೯ ರಿಂದ ೧೧ ವರ್ಷದ ಒಳಗಿನ ಮಕ್ಕಳಿಗೆ ಗೋಣಿಚೀಲ ಜಿಗಿತ, ೬ ರಿಂದ ೮ ವರ್ಷದೊಳಗಿನ ಮಕ್ಕಳಿಗೆ ಬಕೆಟ್‌ಗೆ ಬಾಲ್ ಹಾಕುವ ಸ್ಪರ್ಧೆ, ೨ ರಿಂದ ೪ ವರ್ಷದೊಳಗಿನ ಮಕ್ಕಳಿಗೆ ಗೋಲಿ ಹೆಕ್ಕುವ ಸ್ಪರ್ಧೆ, ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸಲಾಗಿದೆ.