ಮಡಿಕೇರಿ, ಮೇ.೧೩: ಏಳು ವರ್ಷಗಳಿಂದ ಮಡಿಕೇರಿ ನಗರಸಭೆಯ ಶೌಚಾಲಯದಲ್ಲಿಯೇ ತಂಗುತ್ತಿದ್ದ ಅರಿವರ್ಸ್ ಎಂಬ ವ್ಯಕ್ತಿಗೆ ಮಡಿಕೇರಿ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಈ ವ್ಯಕ್ತಿ ಮಡಿಕೇರಿ ಇಂದಿರಾನಗರದ ನಿವಾಸಿಯಾಗಿದ್ದು ಅವಿವಾಹಿತ ರಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಶೌಚಾಲಯ ದಲ್ಲಿ ವಾಸಿಸುತ್ತಿದ್ದ ಇವರು ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಈ ವ್ಯಕ್ತಿ ಬಗ್ಗೆ ಕಾಳಜಿ ವಹಿಸಿ ಇವರ ಮಾಹಿತಿಯನ್ನು ಶ್ರೀ ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕರಿಗೆ ನೀಡಿದ ಸಂದರ್ಭ ಆಶ್ರಮದ ವ್ಯವಸ್ಥಾಪಕರು ವ್ಯಕ್ತಿಯನ್ನು ಭೇಟಿ ಮಾಡಿ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಿದ್ದಾರೆ.