ನಾಪೋಕ್ಲು, ಮೇ ೧೩: ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು.

ತಕ್ಕ ಮುಖ್ಯಸ್ಥರು ಹಾಗೂ ಭಕ್ತಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಅವರು ದೇವರ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಧಾರ್ಮಿಕ ಪೂಜಾ ವಿಧಿ ವಿಧಾನಕ್ಕೆ ಚಾಲನೆ ನೀಡಿದರು. ಬಳಿಕ ಅಂಕುರಾರ್ಪಣೆ, ಪ್ರಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಜರುಗಿದವು. ಇದಕ್ಕೂ ಮೊದಲು ನೀಲೇಶ್ವರ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ಅವರನ್ನು ಚಂಡೆ ಮೇಳದೊಂದಿಗೆ ಸ್ವಾಗತ ಮಾಡಿಕೊಳ್ಳಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ಭಕ್ತಜನ ಸಂಘದ ಕಾರ್ಯದರ್ಶಿ ಬಟ್ಟೀರ ಚೋಂದಮ್ಮ ಮೇದಪ್ಪ, ಖಜಾಂಚಿ ಅಂಜಪರವAಡ ಕುಶಾಲಪ್ಪ, ನಿರ್ದೇಶಕ ಪರದಂಡ ನರೇಂದ್ರ, ಮಾಜಿ ಅಧ್ಯಕ್ಷ ಕಾಂಡAಡ ಜೋಯಪ್ಪ, ಕಣಿಯರ ನಾಣಯ್ಯ, ಉದಿಯಂಡ ಸುಭಾಷ್, ಬಟ್ಟಿರ ಮೇದಪ್ಪ, ಕಾಂಡAಡ ಉಷಾ ಜೋಯಪ್ಪ, ಮಾಜಿ ಖಜಾಂಚಿ ನಂಬುಡಮಾಡ ಸುಬ್ರಮಣಿ, ಅನ್ನಾಡಿಯಂಡ ದಿಲೀಪ್ ಕುಮಾರ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.

ತಾ. ೧೪ ರಂದು (ಇಂದು) ಬೆಳಿಗ್ಗೆ ೭:೦೦ಗೆ ಗಣಪತಿ ಹೋಮ ಅಂಕುರ ಪೂಜೆ, ಬಿಂಬಶುದ್ಧಿ ಕಲಶ ಪೂಜೆ, ಬಿಂಬಶುದ್ಧಿ ಕಲಶಾಭಿಷೇಕ, ಪ್ರಾಯಶ್ಚಿತ ಹೋಮ, ಕಲಶಾಭಿಷೇಕ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ.