ಮಡಿಕೇರಿ, ಮೇ ೧೩: ಬಾಸುಮ ಕೊಡಗು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೋವಿ - ಕೊಳಲು ಸಿನಿಮಾದ ಮುಹೂರ್ತ ಸಮಾರಂಭ ತಾ. ೧೫ ರಂದು (ನಾಳೆ) ಬೆಳಿಗ್ಗೆ ೯.೧೫ಕ್ಕೆ ಮಡಿಕೇರಿಯ ರಾಜಾಸೀಟ್‌ನಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಬಾಸುಮ ಕೊಡಗು, ಎಂಪೀರಿಯಾ ಎಂಟರ್‌ಟೈನ್‌ಮೆAಟ್ ನಿರ್ಮಾಣದಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಕೊಡಗು, ಸುಳ್ಯ-ಸಂಪಾಜೆ ಭಾಗದಲ್ಲಿ ನಡೆಯುವ ಕಥೆಯನ್ನು ಸಿನಿಮಾವಾಗಿ ರೂಪಿಸಲಾಗುತ್ತಿದೆ. ಗುರುರಾಜ ಮಾರ್ಪಳ್ಳಿ ಅವರ ಗರ್ಭ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ರಾಷ್ಟçಪ್ರಶಸ್ತಿ ವಿಜೇತ ನಟಿ ಅಕ್ಷತಾ ಪಾಂಡವಪುರ ಸೇರಿದಂತೆ ನವೀನ್ ಡಿ ಪಡೀಲ್, ಮೋಹಣ್ ಶೇಟಿ, ಮುರುಳಿ ಶೃಂಗೇರಿ, ಆನಂದ್ ತುಮಕೂರು, ಶೈಲಶ್ರೀ, ಡಿಂಗ್ರಿ ನರೇಶ್, ಪಲ್ಲವಿ ಕೊಡಗು ಸೇರಿದಂತೆ ಅನೇಕ ಕಲಾವಿದರು ತಾರಂಗಣದಲ್ಲಿದ್ದಾರೆ. ನಾಯಕಿಯಾಗಿ ಮಾನ್ಯ ಕುಮಾರ್ ಅವರನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು. ಕಲೆ ಮತ್ತು ಹಣದ ನಡುವಿನ ಸಂಘರ್ಷ ಕಥೆ ಇದಾಗಿದ್ದು, ಕೊಡಗಿನಿಂದ ಚಿತ್ರೀಕರಣ ಆರಂಭಿಸಲಾಗುತ್ತದೆ. ೨೦ ದಿನಗಳ ಕಾಲ ಮಡಿಕೇರಿ, ಸುಳ್ಯ, ಸಂಪಾಜೆ ಭಾಗದಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿ ಕಲಾನಿರ್ದೇಶಕ ನಿರ್ಮಾಪಕ ಬಿ.ಡಿ. ಕುಮಾರ್, ಲೋಕೇಶ್ ಊರುಬೈಲು, ಸಂಭಾಷಣೆಗಾರ ಶೌರ್ಯ ತೇಜ್, ಛಾಯಾಗ್ರಾಹಕ ತ್ರಿಶಾಂಕ್ ಉಪಸ್ಥಿತರಿದ್ದರು.