ಮುಳ್ಳೂರು, ಮೇ ೧೪: ಸಮೀಪದ ಕೊಡ್ಲಿಪೇಟೆ ಹೋಬಳಿಗೆ ಸೇರಿದ ಖ್ಯಾತೆ ಗ್ರಾಮದ ಸ.ನಂ ೨೩/೧ ರ ಅರಣ್ಯಕ್ಕೆ ಸೇರಿದ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಜೆಸಿಬಿ ಯಂತ್ರ ಬಳಸಿ ಅರಣ್ಯದೊಳಗೆ ಪ್ರವೇಶ ಮಾಡಿ ಮರಗಳನ್ನು ಕಡಿದಿದ್ದಾರೆ ಎಂದು ಗ್ರಾಮಸ್ಥರು ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಘಟನೆ ನಡೆದಿದೆ. ದೂರಿನ ಹಿನ್ನೆಲೆಯಲ್ಲಿ ಶನಿವಾರಸಂತೆ ಆರ್‌ಎಫ್‌ಒ ಪೂಜಾಶ್ರೀ, ಅರಣ್ಯ ರಕ್ಷಕ ಆನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಣ್ಯದೊಳಗೆ ಪ್ರವೇಶ ಮಾಡಿರುವುದರಿಂದ ಮರ ಕಡಿಯಲು ಬಳಸಿರುವ ಜೆಸಿಬಿ ವಾಹನವನ್ನು ವಶಪಡಿಸಿಕೊಳ್ಳಲಾಗುವುದು ಹಾಗೂ ಈ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತದೆ ಎಂದು ಆರ್‌ಎಫ್‌ಒ ಪೂಜಾಶ್ರೀ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ

ಈ ಸಂದರ್ಭ ಗ್ರಾಮಸ್ಥರಾದ ಕೆ.ಜಿ. ಶಿವಕುಮಾರ್, ಎಚ್.ಎಂ.ರಾಜಶೇಖರ್, ಮೋಕ್ಷಿತ್‌ರಾಜ್, ಗಣೇಶ್, ಕೇಶವ, ಕಾಂತರಾಜ್, ಭರತ್, ದಿನೇಶ್, ಕೀರ್ತಿ ಮುಂತಾದವರು ಇದ್ದರು.