ಗುಡ್ಡೆಹೊಸೂರು, ಮೇ ೧೪: ಇಲ್ಲಿಗೆ ಸಮೀಪದ ಬಸವನಹಳ್ಳಿ ಹೇರೂರು ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಯ ಗುಣಮಟ್ಟ ಸರಿ ಇಲ್ಲವೆಂದು ಆರೋಪಿಸಿ ಒಂದು ಭಾಗದಿಂದ ಕೆಲಸ ಪ್ರಾರಂಭಿಸುವAತೆ ಅಲ್ಲಿನ ಸಾರ್ವಜನಿಕರು ಒತ್ತಾಯಿಸಿದ ಘಟನೆ ನಡೆಯಿತು.
ಅಲ್ಲದೆ ಸ್ಥಳಕ್ಕೆ ಗುತ್ತಿಗೆದಾರರು ಬರುವಂತೆ ಒತ್ತಾಯಿಸಿ ಕೆಲಸವನ್ನು ನಿಲ್ಲಿಸ ಲಾಯಿತು. ಈ ಸಂದರ್ಭ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಗನ್ನಾಥ್, ಅರುಣ್ ಕುಮಾರ್, ದಿಶಾಂತ್ ಕುಮಾರ್, ಸಂಜು ಮತ್ತು ಹಲವಾರು ಮಂದಿ ಗ್ರಾಮಸ್ಥರು ಹಾಜರಿದ್ದರು.