ಮಡಿಕೇರಿ, ಮೇ ೧೬: ಮುಂಬರುವ ಮುಂಗಾರು ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ವಿಪತ್ತು ರಕ್ಷಣಾ ಕಾರ್ಯಾಚರಣೆ ಸಂಬAಧ ಹಾರಂಗಿ ಹಿನ್ನೀರಿನಲ್ಲಿ ಅಣಕು ಪ್ರದರ್ಶನ ನಡೆಯಿತು.
ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ರಕ್ಷಣಾ ಕಾರ್ಯಾಚರಣೆಗಾಗಿ ದೋಣಿಗಳನ್ನು ಬಳಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಎಲ್ಲಾ ಸುರಕ್ಷತಾ ಕ್ರಮಗಳ ಉಪಕರಣಗಳ ಬಳಕೆ ಸಂಬAಧ ಪ್ರಾತ್ಯಕ್ಷಿಕೆ ನೀಡಲಾಯಿತು ಹಾಗೂ ಅವುಗಳನ್ನು ಬಳಸುವ ಸರಿಯಾದ ವಿಧಾನಗಳನ್ನು, ಜೀವ ರಕ್ಷಿಸುವ ವಿಧಾನಗಳನ್ನು ಮತ್ತು ದೋಣಿಗಳು, ಅವುಗಳ ಮೋಟಾರ್‌ಗಳನ್ನು ನಿರ್ವಹಿಸುವ ಬಗ್ಗೆ ತಿಳಿಸಲಾಯಿತು. ೩ ಡಿವೈಎಸ್ಪಿ, ೬ ಪೊಲೀಸ್ ನಿರೀಕ್ಷಕರು, ವೃತ್ತ ನಿರೀಕ್ಷಕರುಗಳು, ೧೫ ಠಾಣಾಧಿಕಾರಿಗಳು, ೧೫ ಅಗ್ನಿಶಾಮಕ ದಳ ಸಿಬ್ಬಂದಿ, ೭ ಗೃಹರಕ್ಷಕ ದಳ ಸಿಬ್ಬಂದಿ, ೪೦ ಮುಖ್ಯ ಪೇದೆಗಳು ಮತ್ತು ಪೇದೆಗಳು ಇದರಲ್ಲಿ ಪಾಲ್ಗೊಂಡಿದ್ದರು ಎಂದು ಎಸ್ಪಿ ಬಿಂದುಮಣಿ ತಿಳಿಸಿದ್ದಾರೆ.