ಮಲ್ಮಕಪ್ ಹಾಕಿ
ಮಡಿಕೇರಿ, ಮೇ ೧೬: ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕಕ್ಕಬ್ಬೆಯ ಮಲ್ಮಹಾಕಿ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಜಿಲ್ಲಾ ಹಾಕಿ ಲೀಗ್ನ ಟಾಪ್ ೮ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯ ಫೈನಲ್ಗೆ ಮಡಿಕೇರಿಯ ಚಾರ್ಮರ್ಸ್ ಹಾಗೂ ಕೋಣನಕಟ್ಟೆ ಇಲವೆನ್ ಪ್ರವೇಶಿಸಿವೆ.
ಇಂದು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಕೋಣನಕಟ್ಟೆ ಇಲವೆನ್ ತಂಡ ಡಾಲ್ಫಿನ್ ಸೋಮವಾರಪೇಟೆ ತಂಡವನ್ನು ೬-೧ ಗೋಲುಗಳ ಅಂತರದಿAದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಚಾರ್ಮರ್ಸ್ ಮಡಿಕೇರಿ ತಂಡ ರಾಯಲ್ಸ್ ಅಮ್ಮತ್ತಿ ತಂಡವನ್ನು ೫-೨ ಗೋಲಿನಿಂದ ಪರಾಭವಗೊಳಿಸಿ ಫೈನಲ್ ತಲುಪಿತು. ತಾ. ೧೭ ರಂದು (ಇಂದು) ಬೆಳಿಗ್ಗೆ ೧೦.೩೦ಕ್ಕೆ ಫೈನಲ್ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಬಲ್ಲಚಂಡ ಡೆನ್ ತಿಮ್ಮಯ್ಯ, ತುದಿಮಾಡ ಲೋಕೇಶ್ ಕುಟ್ಟಪ್ಪ, ಹಾಕಿ ಕೂರ್ಗ್ನ ಪಳಂಗAಡ ಲವಕುಮಾರ್, ಅಮ್ಮಂಡಿರ ಚೇತನ್, ಕೈಗ್ ಗ್ರೂಪ್ನ ಕುಟ್ಟಂಡ ಸುದಿನ್ ಮಂದಣ್ಣ, ಮಾದಂಡ ಸಂದೇಶ್ ಅಪ್ಪಯ್ಯ ಪಾಲ್ಗೊಳ್ಳಲಿದ್ದಾರೆ.
ವಿಜೇತ ತಂಡ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡ ರೂ. ೩೦ ಸಾವಿರ ನಗದು ಹಾಗೂ ಟ್ರೋಫಿ ಪಡೆಯಲಿದೆ.