ಮಡಿಕೇರಿ, ಮೇ ೧೬: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎ ಡಿವಿಷನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.

ಗುಂಪು ಹಂತಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಎಸ್.ಆರ್.ವಿ ಮಡಿಕೇರಿ, ಸಹಾರಾ ಒಂಟಿಯAಗಡಿ, ಮಿಲನ್ಸ್ ಅಮ್ಮತ್ತಿ ಮತ್ತು ಐಎನ್‌ಎಸ್ ಗುಡ್ಡೆಹೊಸೂರು ತಂಡಗಳು ಸೆಮಿಫೈನಲ್ ಪ್ರವೇಶ ಮಾಡಿವೆ.

ಇಂದು ನಡೆದ ಮೂರನೇ ದಿನದಾಟದ ಪಂದ್ಯಗಳಲ್ಲಿ ಮಿಲನ್ಸ್ ತಂಡ ಆಕ್ಸ್ಫರ್ಡ್ ತಂಡವನ್ನು ೧-೦ ಗೋಲುಗಳಿಂದ ಮಣಿಸಿದರೆ, ವೈಷ್ಣವಿ ಎಫ್ ಸಿ ವಿರುದ್ಧ ಎಸ್‌ಆರ್‌ವಿ ತಂಡ ೩-೧ ಗೋಲುಗಳ ಗೆಲುವು ದಾಖಲಿಸಿತು. ಮತ್ತೊಂದು ಪಂದ್ಯದಲ್ಲಿ ಎನ್.ವೈ.ಸಿ ತಂಡದ ವಿರುದ್ಧ ಆಕ್ಸ್ಫರ್ಡ್ ತಂಡ ೩-೦ ಗೋಲುಗಳ ಜಯ ದಾಖಲಿಸಿತು.

ಐಎನ್‌ಎಸ್ ತಂಡ ಮತ್ತು ರಶ್ ಅವರ್ ತಂಡಗಳ ನಡುವಣ ಪಂದ್ಯ ಗೋಲು ರಹಿತ ಡ್ರಾ ಆದರೆ, ಬಿವೈಸಿ ಹಾಗೂ ಎಂಸಿಸಿ ತಂಡದ ನಡುವಿನ ಪಂದ್ಯ ಕೂಡ ಗೋಲುಗಳಿಲ್ಲದೆ ಡ್ರಾ ಆಯಿತು. ದಿನದ ಕೊನೆಯ ಪಂದ್ಯದಲ್ಲಿ ಎಂಸಿಸಿ ವಿರುದ್ಧ ರಶ್ ಅವರ್ ತಂಡ ೨-೦ ಗೋಲುಗಳಿಂದ ಗೆದ್ದು ಬೀಗಿತು.

ಇಂದು ಫೈನಲ್ಸ್

ತಾ. ೧೭ ರಂದು (ಇಂದು) ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎಸ್.ಆರ್.ವಿ ಮಡಿಕೇರಿ ಹಾಗೂ ಸಹಾರ ಒಂಟಿಯAಗಡಿ ತಂಡ ಮುಖಾಮುಖಿಯಾಗಲಿದೆ.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಮಿಲನ್ಸ್ ಅಮ್ಮತ್ತಿ ತಂಡ ಐಎನ್‌ಎಸ್ ಗುಡ್ಡೆಹೊಸೂರು ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಮಧ್ಯಾಹ್ನ ೧ ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ.