ಕಣಿವೆ, ಮೇ ೧೬: ಕ್ರೀಡೆಗಳಿಂದಾಗಿ ಪರಸ್ಪರ ಸ್ನೇಹ ಸೌಹಾರ್ದ ಮೂಡುತ್ತವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್. ವಿ. ಶಿವಪ್ಪ ಹೇಳಿದರು. ಕುಶಾಲನಗರ ತಾಲೂಕು ವೀರಶೈವ ಮಹಾಸಭಾದ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಮಕ್ಕಳು ಹಾಗೂ ಮಹಿಳೆಯರಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಗಳು ದೈಹಿಕ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ವೀರಶೈವ ಮಹಾಸಭಾ ಸಮುದಾಯದ ಮಂದಿ ಒಗ್ಗೂಡುವ ಮೂಲಕ ಸಮಾಜದ ಸಂಘಟನೆಗೆ ಒತ್ತು ನೀಡಬೇಕೆಂದು ಶಿವಪ್ಪ ಕರೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ಕೈಗಾರಿಕಾ ಹಾಗೂ ವಾಣಿಜ್ಯ ಘಟಕದ ರಾಜ್ಯ ನಿರ್ದೇಶಕ ಗರಗಂದೂರು ಸತೀಶ್ ಮಾತನಾಡಿ, ಕೊಡಗಿನಲ್ಲಿ ಲಿಂಗಾಯಿತರು ಒಗ್ಗೂಡುವ ಮೂಲಕ ಸಂಘಟಿತರಾಗಬೇಕಿದೆ ಎಂದರು.
ಕುಶಾಲನಗರ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ಎಂ. ಮಧುಸೂದನ್, ಕಾರ್ಯದರ್ಶಿ ಎಸ್. ಧರ್ಮೇಂದ್ರ, ಕೊಡಗು ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್.ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಉದ್ಯಮಿ ಬಸವರಾಜು, ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಿಕಾ ಕರುಣ, ಕಾರ್ಯದರ್ಶಿ ಲೇಖನಾ ಧರ್ಮೇಂದ್ರ, ಯುವ ಘಟಕದ ತಾಲೂಕು ಅಧ್ಯಕ್ಷ ಹೆಚ್.ಪಿ. ವಿನಯ್, ನಗರ ಯುವ ಘಟಕದ ಅಧ್ಯಕ್ಷ ಎಂ.ಸಿ. ಸಚಿನ್, ನಿರ್ದೇಶಕಿ ಮನು ಜಗದೀಶ್, ಯಶೋಧ ಮಹದೇವಪ್ಪ, ವೀರಶೈವ ಸಮುದಾಯದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ನಂದೀಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಗಣೇಶ್, ಶಿಕ್ಷಕ ಎಸ್.ಪಿ ಪರಮೇಶ್, ಶುಭಶೇಖರ್, ಉದಯಕುಮಾರ, ಎಸ್. ಎಸ್. ವಿರೂಪಾಕ್ಷ, ಟಿ.ಎಸ್. ಸೌಭಾಗ್ಯ ಮತ್ತಿತರÀರಿದ್ದರು. ಕ್ರೀಡಾಕೂಟದಲ್ಲಿ ಯುವಕರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ ಸ್ಟಿಕ್ಕರ್ ಅಂಟಿಸುವುದು, ಒಂಟಿಕಾಲು ಓಟ, ಬಲೂನು ಒಡೆವುದು, ಕಾಲೇಜು ವಿದ್ಯಾರ್ಥಿಗಳಿಗೆ ನೂರು ಮೀ. ಓಟದ ಸ್ಪರ್ಧೆ, ನಿಂಬೆ ಚಮಚ, ನಿಧಾನ ಬೈಕ್ ಚಾಲನೆ, ಮಹಿಳೆಯರಿಗೆ ರಂಗೋಲಿ, ಪುರುಷರಿಗೆ ಭಾರದ ಗುಂಡು ಎಸೆತ ಸೇರಿದಂತೆ ಅನೇಕ ಕ್ರೀಡೆಗಳು ನಡೆದವು.