ಚೆಯ್ಯಂಡಾಣೆ, ಮೇ ೨೧: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೀತ ಗಾಯನ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದವು.
ಗೀತ ಗಾಯನ
ಮಧ್ಯಾಹ್ನ ಭೋಜನ ವೇಳೆಯಲ್ಲಿ ಗೀತ ಗಾಯನ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾವೇರಿ ಕಾಲೇಜು ಉಪನ್ಯಾಸಕಿ ಆಂಗೀರ ಕುಸುಮ್ ಸಂತೋಷ್ ಉದ್ಘಾಟಿಸಿದರು. ಉದಯೋನ್ಮುಖ ಗಾಯಕರುಗಳು ಕನ್ನಡ ಗೀತೆಗಳನ್ನು ಹಾಡಿದರು. ಕಸಾಪ ನಾಪೋಕ್ಲು ಹೋಬಳಿ ಗೌರವ ಕಾರ್ಯದರ್ಶಿ ಪಾಡಿಯಮ್ಮಂಡ ಉಮಾ ಪ್ರಭು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದರು. ಪ್ರಚಾರ ಸಮಿತಿಯ ಸಂಚಾಲಕ ಮೊಹಮ್ಮದ್ ಎಂ.ಯು. ಸ್ವಾಗತಿಸಿ, ನಿರೂಪಿಸಿ, ಭವ್ಯ ನಿರ್ವಹಣೆ ಮಾಡಿ, ರೋಹಿತ್ ವಂದಿಸಿದರು.
ವಿಚಾರಗೋಷ್ಠಿ
ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು. ವೀರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ದಯಾನಂದ ಕೂಡಕಂಡಿ ಆಶಯ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಕಾರುಗುಂದ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಎಸ್. ಗಣಪತಿ, ಅಂಕುರ್ ಪಬ್ಲಿಕ್ ಶಾಲೆಯ ವ್ಯವಸ್ಥಾಪಕ ಕೇಟೋಳಿರ ರತ್ನ ಚರ್ಮಣ, ಬೊಳ್ಳಚೆಟ್ಟಿರ ಪ್ರಕಾಶ್ ಕಾಳಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಿಚಾರ ಗೋಷ್ಠಿ ಒಂದರಲ್ಲಿ ಉಪನ್ಯಾಸಕ ಸಿ.ಎ. ಮೊಹಮ್ಮದ್ ನಿಝಾರ್ ಸಖಾಫಿ ಕಡಂಗ ನರಿಯಂದಡ ಗ್ರಾಮದ ಐತಿಹ್ಯಗಳ ಬಗ್ಗೆ ವಿವರಿಸಿ ಮಾತನಾಡಿದರು. ವಿಷಯ ಎರಡಲ್ಲಿ ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಜೆ. ದಿವಾಕರ ಮಡಿಕೇರಿ ತಾಲೂಕಿನಲ್ಲಿ ಕನ್ನಡ, ಕೊಡವ ಮತ್ತು ಅರೆಭಾಷೆ ಸಾಹಿತ್ಯದಲ್ಲಿ ಕೃಷಿ ಮಾಡಿದ ಸಾಹಿತಿಗಳ ಕುರಿತು ಉಪನ್ಯಾಸ ನೀಡಿದರು.
ವಿಷಯ ಮೂರರಲ್ಲಿ ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ತಳೂರು ಸ್ವರ್ಣ ಕಿಶೋರ್ ಕೃಷಿ ಕ್ಷೇತ್ರದಲ್ಲಿ ರೈತಾಪಿ ಜನರಿಗೆ ಇರುವ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗೋಪಾಯಗಳ ಬಗ್ಗೆ ಉಪನ್ಯಾಸ ನೀಡಿದರು. ಕೇಕಡ ಪೂಜಾ ಸ್ವಾಗತಿಸಿ, ಅಂಬಿಕಾ ಅಶೋಕ ನಿರ್ವಹಣೆ ಮಾಡಿ, ವಂದನಾ ನಿರೂಪಿಸಿ, ರಶ್ಮಿ ಶಿವರಾಂ ವಂದಿಸಿದರು.
ಕವಿಗೋಷ್ಠಿ
ಸಾಹಿತಿ ಮಾರುತಿ ದಾಸಣ್ಣನವರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಕಡಂಗ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಸಾಹಿತಿ ವತ್ಸಲಾ ಶ್ರೀಷ ಆಶಯ ನುಡಿಗಳನ್ನಾಡಿದರು. ಕವಿಗಳಾದ ಬೆಟ್ಟಗೇರಿಯ ಸುನೀತಾ ವಿಶ್ವನಾಥ್, ನೆಲಜಿಯ ಸೋಮಣ್ಣ ಎಂ.ಟಿ., ಮರಗೋಡುವಿನ ಮುಕ್ಕಾಟಿ ಹರಿಣಿ ಗಿರೀಶ್, ಕುಂಜಿಲದ ಮೊಹಮ್ಮದ್ ಶಾಫಿ, ಬೆಟ್ಟಗೇರಿಯ ಸತೀಶ್ ಕುಮಾರ್, ಕೆ.ಎಂ.ಸುಶೀಲ, ಮೂಟೆರ ಕೆ ಗೋಪಾಲಕೃಷ್ಣ, ಭಾಗಮಂಡಲದ ಭುವನ, ಮಡಿಕೇರಿಯ ಅಬ್ದುಲ್ಲ, ಕುಂದಚೇರಿಯ ಎಂ.ಕೆ.ಲಲಿತಾ, ಮದೆನಾಡುವಿನ ಸಿದ್ದರಾಜು ಬೆಳ್ಳಯ್ಯ, ದಿಲೀಶ್ ನಾಯರ್, ಶಿಲ್ಪ ಬಿ.ಎ., ಕೊಕೇರಿಯ ಅಬ್ದುಲ್ ಸಮದ್ ಕಿಕ್ಕರೆ ಭಾಗವಹಿಸಿ ಸ್ವರಚಿತ ಕವನ ವಾಚಿಸಿದರು.
ಬಾಕಿಲನ ಮಮತಾ ಸಚಿನ್ ಸ್ವಾಗತಿಸಿ, ಉಷಾ ರಾಣಿ ನಿರೂಪಿಸಿ ಗುಲ್ಶನ್ ಕುಮಾರ್ ವಂದಿಸಿದರು.
ಬಹಿರAಗ ಅಧಿವೇಶನ
ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಿತು. ಗೌರವ ಕಾರ್ಯದರ್ಶಿ ಬಾಳೆಯಡ ದಿವ್ಯ ಮಂದಣ್ಣ ನಿರ್ಣಯ ಮಂಡನೆ ಮಾಡಿದರು. ಕಾರ್ಯದರ್ಶಿ ಗುಡ್ಡೇರ ಲಕ್ಸು ಸೋಮಣ್ಣ ಸ್ವಾಗತಿಸಿ, ಭಾಗಮಂಡಲ ಹೋಬಳಿ ಅಧ್ಯಕ್ಷ ಸುನಿಲ್ ಪತ್ರಾವೋ ನಿರೂಪಿಸಿ, ಕೋಶಾಧಿಕಾರಿ ಸಿದ್ದರಾಜು ಬೆಳ್ಳಯ್ಯ ವಂದಿಸಿದರು.
ಸಾಧಕರಿಗೆ ಸನ್ಮಾನ
ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಧ್ಯಕ್ಷತೆಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಬಿಟ್ಟೀರ ಚೋದಮ್ಮ, ಶಿಕ್ಷಣದಲ್ಲಿ ಚೇನಂಡ ಪಾರ್ವತಿ, ಸಹಕಾರ ಕ್ಷೇತ್ರದಲ್ಲಿ ಪಾಂಡAಡ ಕಿಟ್ಟು ಅಯ್ಯಣ್ಣ, ಸಮಾಜ ಸೇವೆಯಲ್ಲಿ ಹೆಚ್.ಎಲ್. ದಿವಾಕರ್, ಜನಪದದಲ್ಲಿ ನಂಬಿಯಪAಡ ಎ. ಕರುಂಬಯ್ಯ, ಕೃಷಿಯಲ್ಲಿ ದೆಯಿರಾ ಸುಭಾಷ್ ಭೀಮಯ್ಯ, ಸೇನೆಯಲ್ಲಿ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ, ರಕ್ಷಣಾ ಕ್ಷೇತ್ರದಲ್ಲಿ ಎಂ.ಕೆ.ಅಬ್ದುಲ್ ಸಲಾಂ, ಮಾಧ್ಯಮ ಕ್ಷೇತ್ರದಲ್ಲಿ ದುಗ್ಗಳ ಸದಾನಂದ, ವೈದ್ಯಕೀಯ ಕ್ಷೆತ್ರದಲ್ಲಿ ಎಚ್. ಉರಾಳ, ನಾಟಿ ವೈದ್ಯ ನಂದ ಕುಮಾರ್ ಪಡಿಞರಂಡ, ಜಾನಪದ ಪರಿಕರ ಪೊನ್ನಚನ ಮಧುಸೂಧನ್, ಹಾಕಿಯಲ್ಲಿ ಪಾಂಡAಡ ರಾಜೇಶ್ ಅಯ್ಯಪ್ಪ, ಕ್ರೀಡೆಯಲ್ಲಿ ಪಟ್ಟಚೆರುವಂಡ ಗಗನ್ ಮೇದಪ್ಪ, ಶಿಕ್ಷಣ ಕೇತ್ರದಲ್ಲಿ ಚಂದ್ರಾವತಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್, ನಾಪೋಕ್ಲು ಹೋಬಳಿ ಅಧ್ಯಕ್ಷ ನೆರವಂಡ ಉಮೇಶ್, ಜಿಲ್ಲಾ ಕೋಶಾಧಿಕಾರಿ ಸಂಪತ್ ಕುಮಾರ್, ಉದ್ಯಮಿ ಜಯ ಈರಪ್ಪ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಪುದಿಯನೆರವನ ರೇವತಿ ರಮೇಶ್ ಸ್ವಾಗತಿಸಿ, ಕೊಂಪುಳಿರ ಮಮತಾ ವಂದಿಸಿದರು.
- ಅಶ್ರಫ್