ಐಗೂರು, ಮೇ ೨೧ : ಐಗೂರಿನ ಮಾರಿಯಮ್ಮ ದೇವಾಲಯದ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಅರ್ಚಕ ಕೃಷ್ಣಪ್ಪ ಪೂಜಾರಿ ನೇತೃತ್ವದಲ್ಲಿ ದೇವಿಗೆ ಹಣ್ಣುಕಾಯಿ ಪೂಜೆ ಮತ್ತು ಹರಕೆ ಪೂಜೆಗಳು ನೆರವೇರಿದವು. ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.

ಪೂಜೋತ್ಸವದಲ್ಲಿ ದೇವಾಲಯದ ಅಧ್ಯಕ್ಷÀ ಎಲ್.ಎಂ. ರಾಜೇಶ್, ಕಾರ್ಯದರ್ಶಿ ಬಾರನ ರವೀಂದ್ರ, ಖಜಾಂಚಿ ಟಿ.ಆರ್. ಸುದೇವ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.