ಸೋಮವಾರಪೇಟೆ, ಮೇ ೨೨: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸೋಮವಾರಪೇಟೆ ತಾಲೂಕಿಗೆ ಸಂಬAಧಿಸಿದAತೆ ಬಿಪಿಎಲ್ ಪಡಿತರ ಚೀಟಿ ಹೊಂದಲು ಇರಬೇಕಾದ ಮಾನದಂಡಗಳನ್ನು ಹೊರತುಪಡಿಸಿರುವ ೧೦೩೨ ಪಡಿತರ ಚೀಟಿಗಳಲ್ಲಿ ೨೬೧ ಅರ್ಜಿದಾರರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರೆಂದು ಅರ್ಜಿ ಸ್ವೀಕೃತಗೊಂಡಿದ್ದು, ಅದರಲ್ಲಿ ಈಗಾಗಲೇ ೨೨೦ ಅರ್ಜಿಗಳ ಪರಿಶೀಲನೆ ಮಾಡಿ ಈ ಪೈಕಿ ಅರ್ಹರೆಂದು ಕಂಡುಬAದ ೧೮೦ ಪ್ರಕರಣಗಳನ್ನು ಮರುಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಪೈಕಿ ೧೦೨ ಪ್ರಕರಣಗಳನ್ನು ಮರು ಸ್ಥಾಪಿಸಲಾಗಿದ್ದು, ಉಳಿದ ೭೮ ಪ್ರಕರಣಗಳಿಗೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ನೋಟೀಸ್ ನೀಡಲಾಗಿದೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ತಿಳಿಸಿದರು.

ವೈದ್ಯಕೀಯ ತುರ್ತು ಚಿಕಿತ್ಸೆಗೆ ಅರ್ಜಿ ಸಲ್ಲಿಸಲು ಹಾಗೂ ಪಡಿತರ ಚೀಟಿ ತಿದ್ದುಪಡಿಗಾಗಿ ೨೦೨೭ರ ಮಾರ್ಚ್ ೩೧ರವರೆಗೆ ಸರಕಾರದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಯುವನಿಧಿ ಯೋಜನೆಯಡಿ ಜನವರಿ ೨೦೨೪ರಿಂದ ಫೆಬ್ರವರಿ ೨೦೨೬ರವರೆಗೆ ಒಟ್ಟು ೧,೬೪,೭೪,೫೦೦ ರೂ.ಗಳನ್ನು ಯುವನಿಧಿ ಹಣ ನೀಡಲಾಗಿರುತ್ತದೆ ಎಂದು ಉದ್ಯೋಗಾಧಿಕಾರಿ ಮಂಜುನಾಥ್ ತಿಳಿಸಿದರು. ಗೃಹಲಕ್ಷಿ ಯೋಜನೆಯಡಿ ಡಿಸೆಂಬರ್ ೨೦೨೫ರಿಂದ ಫೆಬ್ರವರಿ ೨೦೨೬ರವರೆಗೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ಮಾರ್ಚ್ ೨೦೨೬ರಿಂದ ಮೇ.೨೦೨೬ರವರೆಗೆ ಪಾವತಿಗೆ ಬಾಕಿ ಇದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀದೇವಿ ಮುಧೋಳ್ ಸಭೆಗೆ ತಿಳಿಸಿದರು. v