ಮಡಿಕೇರಿ, ಮೇ ೨೨: ಮಡಿಕೇರಿಯ ರಾಜರ ಗದ್ದುಗೆ ಬಳಿ ತಂತಿಗೆ ಸಿಲುಕಿ ಗಾಯಗೊಂಡಿದ್ದ ನಾಯಿಯೊಂದನ್ನು ರಕ್ಷಣೆ ಮಾಡಲಾಯಿತು. ತಂತಿಯೊAದಕ್ಕೆ ನಾಯಿ ಸಿಲುಕಿ ಪರದಾಡುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯ ನಿವಾಸಿ ತಮೀಮ್ ಎಂಬವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದ ದಳದ ಶಹೀದ್ ಹಾಗೂ ಪ್ರಮೋದ್ ಅವರು ಸ್ಥಳಕ್ಕೆ ಆಗಮಿಸಿ ನಾಯಿಯ ದೇಹಕ್ಕೆ ಸಿಲುಕಿದ್ದ ತಂತಿಯನ್ನು ಬಿಡಿಸಿ ರಕ್ಷಣೆ ಮಾಡಿದ್ದಾರೆ. ಗಾಯಗೊಂಡ ನಾಯಿಯನ್ನು ರಕ್ಷಿಸಿ ಜಿಲ್ಲಾ ಪಶುವೈದ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.