ಕುಶಾಲನಗರ, ಮೇ ೨೨: ಕುಶಾಲನಗರ ಸಮೀಪದ ಗೋಪಾಲ ಸರ್ಕಲ್ ಬಳಿಯ ನೃತ್ಯ ತರಬೇತಿ ಶಾಲೆಯಲ್ಲಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ.

ರಾತ್ರಿ ಸುಮಾರು ೧೧ ಗಂಟೆಗೆ ಕಟ್ಟಡದಿಂದ ಬೆಂಕಿ ಮತ್ತು ಹೊಗೆ ಕಂಡುಬAದ ಹಿನ್ನೆಲೆ ಅಕ್ಕಪಕ್ಕದವರು ಮತ್ತು ಸ್ಥಳೀಯರು ತಕ್ಷಣ ಕುಶಾಲನಗರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗಕ್ಕೆ ಮಾಹಿತಿ ತಿಳಿಸಿದ ಮೇರೆಗೆ ತಕ್ಷಣ ಆಗಮಿಸಿದ ಅಗ್ನಿಶಾಮಕ ತಂಡ ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ.

ವಿದ್ಯುತ್ ಶಾರ್ಟ್ಸರ್ಕ್ಯೂಟ್ ಆಗಿರುವ ಸಾಧ್ಯತೆ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿದ್ದು, ನೃತ್ಯ ಶಾಲೆಗೆ ಸಂಬAಧಿಸಿದ ಪರಿಕರಗಳು ಸುಟ್ಟುಹೋಗಿವೆ.

ಗುರುವಾರ ಬೆಳಿಗ್ಗೆ ಶಾಲೆಯಲ್ಲಿ ಮಕ್ಕಳ ನೃತ್ಯ ತರಬೇತಿ ನಡೆದಿದ್ದು, ಮಧ್ಯಾಹ್ನ ನಂತರ ಮೈಸೂರಿನಲ್ಲಿ ನಡೆಯಲಿರುವ ನೃತ್ಯ ಸ್ಪರ್ಧೆಗೆ ತೆರಳಿದ್ದಾಗಿ ನೃತ್ಯ ಶಾಲೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.