ಚೆಯ್ಯಂಡಾಣೆ, ಮೇ ೨೪: ಸ್ಥಳೀಯ ಕೋಕೇರಿ ಗ್ರಾಮದ ಕಿಕ್ಕರೆ ನೂರುಲ್ ಮದೀನಾ ಜುಮಾ ಮಸೀದಿ ವತಿಯಿಂದ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಯು ಅಬ್ದುಲ್ ಸಮದ್‌ಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಿಕ್ಕರೆ ಜಮಾಅತ್ ಅಧ್ಯಕ್ಷ ಕೆ.ವೈ ಬಷೀರ್ ಅಧ್ಯಕ್ಷತೆಯಲ್ಲಿ ಕಿಕ್ಕರೆ ಮಸೀದಿಯಲ್ಲಿ ನಡೆದ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಇವರನ್ನು ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕಿಕ್ಕರೆ ಮಸೀದಿಯ ಖತೀಬ್ ಷಂಶÀÄದ್ದೀನ್ ಅಮ್ಜದಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್, ಕೋಶಾಧಿಕಾರಿ ಅಬ್ದುಲ್ ರಜಾಕ್, ಊರಿನ ಹಿರಿಯರು, ಜಮಾಅತ್ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.