ಮಡಿಕೇರಿ, ಮೇ ೨೪: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ, ಕೊಡಗು ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ಆನ್‌ಲೈನ್ ಕವನ ವಾಚನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆ ಪೊನ್ನಂಪೇಟೆ ತಾಲೂಕು ವ್ಯಾಪ್ತಿಗೆ ಸೀಮಿತವಾಗಿ ನಡೆಯಲಿದ್ದು, ಭಾಗವಹಿಸುವ ವಿದ್ಯಾರ್ಥಿಗಳು ಒಂದರಿAದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರು, ಶಾಲೆ ಮತ್ತು ತರಗತಿಯನ್ನು ಉಲ್ಲೇಖಿಸಿ, ಕವನದ ರಚನೆಕಾರರ ಹೆಸರಿನೊಂದಿಗೆ ಅಥವಾ ಸ್ವರಚಿತ ಕವನಗಳನ್ನು ೩ ನಿಮಿಷದ ಒಳಗಾಗಿ ವಾಚನ ಮಾಡಿ, ರೆಕಾರ್ಡ್ ಮಾಡಿದ ವೀಡಿಯೋವನ್ನು, ನಳಿನಿ ಹೆಚ್.ಆರ್. ಅವರ ವಾಟ್ಸಾö್ಯಪ್ ಸಂಖ್ಯೆ ೭೩೩೮೬೧೭೮೧೭ಗೆ ತಾ. ೩೦ ರೊಳಗಾಗಿ ತಲುಪುವಂತೆ ಕಳುಹಿಸಬಹುದು.
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಅಭಿನಂದನಾಪತ್ರ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಪೊನ್ನಂಪೇಟೆ ತಾಲೂಕು ಅಧ್ಯಕ್ಷೆ ಚೇಂದಿರ ರಮ್ಯಾ ಜಗನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.