*ಗೋಣಿಕೊಪ್ಪ, ಮೇ ೨೫: ಇಲ್ಲಿನ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ತಿತಿಮತಿ ಆರೋಗ್ಯ ಕೇಂದ್ರದ ಅತ್ತೂರು ಉಪಕೇಂದ್ರದ ಸಹಯೋಗದಲ್ಲಿ ಕ್ಷಯರೋಗ ಚಿಕಿತ್ಸೆ ಮತ್ತು ಆಂದೋಲನ ಕಾರ್ಯಕ್ರಮ ನಡೆಯಿತು. ಕಫದ ಮಾದರಿ ಸಂಗ್ರಹ, ಸಿಕ್ಕಲ್ ಸೆಲ್ ಪರೀಕ್ಷೆ ಮತ್ತು ಟಿ.ಬಿ ರೋಗ ಮತ್ತು ಸಿಕ್ಕಲ್ ಸೆಲ್ ಅನಿಮಿಯಾ ಕಾಯಿಲೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಪರೀಕ್ಷೆ ನಡೆಸಲಾಯಿತು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು, ಗ್ರಾಮಸ್ಥರು ಹೆಚ್ಚಿನ ಭಾಗವಹಿಸಿದ್ದರು.