ನಾಪೋಕ್ಲು, ಮೇ.೨೫: ಬೆಂಗಳೂರಿನ ವಿಶ್ವ ಚೇತನ ಬಳಗವು ಆಯೋಜಿಸಿದ್ದ ರಾಷ್ಟಿçÃಯ ಮಹಾನ್ ನಾಯಕರ ಸಂಸ್ಮರಣಾ ಕಾರ್ಯಕ್ರಮದಲ್ಲಿ, ವಿದ್ಯೆ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಚೋವಂಡ ಚೋಂದಮ್ಮ ಪೂಣಚ್ಚ ಅವರಿಗೆ ರಾಷ್ಟಿçÃಯ ಸಿದ್ದಬುದ್ದ ಪ್ರಶಸ್ತಿ ಹಾಗೂ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದಲ್ಲಿ ಚಾಮೆರ ದಿನೇಶ್ ಬೆಳ್ಯಪ್ಪ ಅವರಿಗೆ ರಾಷ್ಟಿçÃಯ ಭೀಮ್‌ರಾವ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಾಮರಾಜನಗರ ಜಿಲ್ಲಾ ಕೊಳ್ಳೆಗಾಲದ ರೋಟರಿ ಭವನದಲ್ಲಿ, ರೋಟರಿ ಅಧ್ಯಕ್ಷರಾದ ಬಿ. ಮಹದೇವ ಅವರ ಅಧ್ಯಕ್ಷತೆಯಲ್ಲಿ, ವಿಶ್ವಚೇತನ ಬಳಗದ ಅಧ್ಯಕ್ಷ ಎಂ ಶಿವಸ್ವಾಮಿ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಐವರಿಗೆ ರಾಷ್ಟಿçÃಯ ಮತ್ತು ಐವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.