ಮಡಿಕೇರಿ, ಮೇ ೨೬: ಹಲವು ದಶಕಗಳಿಂದ ಮಡಿಕೇರಿ ಸೇರಿದಂತೆ ರಾಜ್ಯ - ರಾಷ್ಟçಮಟ್ಟ ಕಲಾವಿದರು, ಜನಪ್ರತಿನಿಧಿಗಳು, ಹೋರಾಟಗಾರರ ವೇದಿಕೆಯಾಗಿದ್ದ ಮಡಿಕೇರಿಯ ಏಕೈಕ ಕಲಾಮಂದಿರ “ಟೌನ್ ಹಾಲ್’’ (ಕಾವೇರಿ ಕಲಾಕ್ಷೇತ್ರ) ಧರಾಶಾಯಿಯಾಗುತ್ತಿದೆ. ತೀರಾ ಹಳೆಯದಾದ ದುಸ್ಥಿತಿಗೀಡಾಗಿರುವ ಕಲಾಕ್ಷೇತ್ರವನ್ನು ಕೆಡವಿ ನೂತನ, ಮಲ್ಟಿ ಪಾರ್ಕಿಂಗ್ ವ್ಯವಸ್ಥೆಯ ಕಟ್ಟಡ ನಿರ್ಮಾಣ ಮಾಡುವ ಕಾರ್ಯಕ್ಕಾಗಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತಿದೆ.
ಇದರೊಂದಿಗೆ ಗತಕಾಲದ ಹಳೆಯ ನೆನಪುಗಳು ಕಟ್ಟಡ ಗೋಡೆಯ ಇಟ್ಟಿಗೆಗಳೊಂದಿಗೆ ಮಣ್ಣು ಪಾಲಾಗುತ್ತಿದೆ.
- ಸಂತೋಷ್