ಕೂಡಿಗೆ, ಮೇ. ೨೬: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ದುಬಾರೆ ಸಾಕಾನೆ ಶಿಬಿರ ಮತ್ತು ಹಾರಂಗಿ ಸಾಕಾನೆ ಶಿಬಿರಗಳು ಪ್ರವಾಸಿಗರ ಪ್ರವೇಶಕ್ಕೆ ಬಂದ್ ಆಗಿರುವ ಹಿನ್ನಲೆ ಇದರ ಬಗ್ಗೆ ಅರಿವಿಲ್ಲದ ಸಾವಿರಾರು ಪ್ರವಾಸಿಗರು ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರದ ಕೇಂದ್ರಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಾರೆ.

ಹಾರAಗಿ ಸಾಕಾನೆ ಶಿಬಿರದ ಸಮೀಪದಲ್ಲಿರುವ ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ಜಲಕ್ರೀಡೆಯಲ್ಲಿ ಹೆಚ್ಚು ಪ್ರವಾಸಿಗರು ಪಾಲ್ಗೊಳ್ಳುವುದು ಕಂಡು ಬರುತ್ತಿದೆ. ಇದರೊಂದಿಗೆ ಪ್ರವಾಸಿಗರು ಕುಶಾಲನಗರ ಕಾವೇರಿ ನಿಸರ್ಗಧಾಮ ಮತ್ತು ಹಾರಂಗಿಯಲ್ಲಿರುವ ಅಣೆಕಟ್ಟೆಯ ಮುಂಭಾಗದಲ್ಲಿರುವ ಸಂಗೀತ ಕಾರಂಜಿ ಮತ್ತು ಉದ್ಯಾನವನದ ವೀಕ್ಷಣೆಯಲ್ಲಿ ತೊಡಗಿದ್ದಾರೆ.