ಕೂಡಿಗೆ, ಮೇ.೨೬: ರಾಜ್ಯ ಹೆದ್ದಾರಿಯ ಕೂಡಿಗೆ - ಹೆಬ್ಬಾಲೆ ರಸ್ತೆಯ ರೂ.೩ ಕೋಟಿ ೮೦ ಲಕ್ಷ ವೆಚ್ಚಜ ಮರುಡಾಂಬರೀಕರಣ, ರಸ್ತೆಯ ಅಗಲಿಕರಣ ಮತ್ತು ವಿಭಜಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ರಸ್ತೆ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದ್ದರು. ಕಾಮಗಾರಿಯು ಲೋಕೋಪಯೋಗಿ ಇಲಾಖೆಯ ಮುಖೇನ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ಉತ್ತಮ ಗುಣಮಟ್ಟದ ರೂ. ೩.೮೦ ಕೋಟಿ ವೆಚ್ಚದ ಹಾಸನಕ್ಕೆ ತೆರಳುವ ರಾಜ್ಯ ಹೆದ್ದಾರಿಯಾದ ಕೂಡಿಗೆ - ಹೆಬ್ಬಾಲೆ ಭಾಗದ ಆಯ್ದ ಭಾಗಗಳಲ್ಲಿ ಕಾಮಗಾರಿಯ ಭಾಗವಾಗಿ ತಿರುವು ರಸ್ತೆ, ಅಪಘಾತ ವಲಯದ ಸ್ಥಳಗಳಲ್ಲಿ ರಸ್ತೆಯ ಅಗಲೀಕರಣ ಮತ್ತು ಮರುಡಾಂಬರೀಕರಣ ಕಾರ್ಯ ನಡೆಯುತ್ತಿದೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೆಚ್.ಎಸ್ ಕುಮಾರ್, ಇಂಜಿನಿಯರ್ ಅರ್ಬಾಜ್ ಹಾಜರಿದ್ದು ಕಾಮಗಾರಿಯ ಪರಿಶೀಲನೆ ನಡೆಸಿದರು. ಈ ಸಂದರ್ಭ ಗುತ್ತಿಗೆದಾರ ಪ್ರಸಾದ್ ರೈ ಸೇರಿದಂತೆ ಇಂಜಿನಿಯರ್ ಹಾಜರಿದ್ದರು.