ಮಡಿಕೇರಿ, ಮೇ ೨೬:ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ೧೧ನೇ ಕೊಡವ ಪುಸ್ತಕ ಪತ್ತಾಯವನ್ನು ಬಲಂಬೇರಿಯಲ್ಲಿರುವ ಪಾಲಂದಿರ ಐನ್‌ಮನೆಯಲ್ಲಿ ತಾ. ೩೧ ರಂದು ಬೆಳಿಗ್ಗೆ ೯.೩೦ ಗಂಟೆಗೆ ಸ್ಥಾಪಿಸಲಾಗುತ್ತದೆ.

ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಪಾಲಂದಿರ ಕುಟುಂಬದ ಪಟ್ಟೆದಾರ ಪಾಲಂದಿರ ನಂಜಪ್ಪ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭ ಬಾಳೋಪಾಟ್‌ನಲ್ಲಿ ನುರಿತರಾಗಿರುವ ಪಾಲಂದಿರ ಮೊಣ್ಣಪ್ಪ ಹಾಗೂ ಬೊಳಕಾಟ್ ನುರಿತರಾಗಿರುವ ಪಾಲಂದಿರ ರವಿಮಂದಣ್ಣ ಅವರನ್ನು ಸನ್ಮಾನಿಸಲಾಗುವುದು.ಈ ವೇಳೆ ಕೋಟೆರ ಕುಟುಂಬಕ್ಕೆ ದುಡಿ ವಿತರಿಸಲಾಗುವುದು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ರಿಜಿಸ್ಟಾçರ್ ಚಿನ್ನಸ್ವಾಮಿ ತಿಳಿಸಿದ್ದಾರೆ.