ವೀರಾಜಪೇಟೆ, ಮೇ: ೨೬: ಎರಡು ವರ್ಷಗಳಿಗೊಮ್ಮೆ ಮೂರು ಗ್ರಾಮಗಳು ಒಂದಾಗಿ ಆಚರಿಸುವ ಶ್ರೀ ಭದ್ರಕಾಳಿ ದೇವಿಯರ ಬೋಡ್ ನಮ್ಮೆ ಶ್ರದ್ಧಾಭಕ್ತಿಯಿಂದ ಸಂಪನ್ನವಾಯಿತು.

ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ, ಮಗ್ಗುಲ, ಮತ್ತು ವೈಪಡ ಗ್ರಾಮಗಳಲ್ಲಿ ಶ್ರೀ ಭದ್ರಕಾಳಿ ದೇವಿ ನೆಲೆ ಕಂಡಿದ್ದು ಶ್ರಧ್ಧಾಭಕ್ತಿಯಿಂದ ಉತ್ಸವ ನಡೆಯಿತು.

ತಾ.೧೫ ರಂದು ಐಮಂಗಲ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದಲ್ಲಿ ಬೋಡ್ ನಮ್ಮೆಗೆ ಕಟ್ಟು ಹಾಕುವ ಮೂಲಕ ಚಾಲನೆ ನೀಡಲಾಯಿತು. ನವದಿನಗಳ ಕಾಲ ಹಬ್ಬದ ಅಚರಣೆ ನಡೆಯಿತು. ಬೋಡ್ ನಮ್ಮೆ ಆಚರಣೆಯ ಪ್ರಯುಕ್ತ ಮೂರು ದಿನಗಳು ಪೀಲಿಆಟ್, ಮತ್ತು ತಾಲಿ ಪಾಟ್ ನಡೆಯಿತು.

ಗ್ರಾಮಸ್ಥರು ವಿವಿಧ ವೇಷಗಳನ್ನು ಧರಿಸಿ ಮನೆ ಮನೆಗೆ ತೆರಳಿ ವೇಷಗಳನ್ನು ಪ್ರದರ್ಶನ ಮಾಡಿ ಮರು ದಿನ ತಾ. ೨೦ ರಂದು ಸಂಜೆ ೪ ರ ವೇಳೆಗೆ ವೇಷಧÀರಿಸಿದ್ದ ವೇಷಧಾರಿಗಳು ದೇವಾಲಯದ ಪ್ರಾಂಗಣಕ್ಕೆ ಮೂರು ಪ್ರದಕ್ಷಿಣೆ ಸಲ್ಲಿಸಿ ಹರಕೆಯನ್ನು ಒಪ್ಪಿಸಿದರು.

ತಾ.೨೧ ರಂದು ಮೂರು ಊರುಗಳಿಂದ ಅಯ್ಯಪ್ಪ ದೇವರ ಬೆಳ್ಳಿ ಕುದುರೆಗಳು ಹೊರಟು ಮಾಚೆಟ್ಟಿ ಪಾರೆ ಎಂಬಲ್ಲಿ ಕುದುರೆ ಆಟ್ ನಡೆಯಿತು. ರಾತ್ರಿ ತೆರೆ ನಡೆಯಿತು.

ತಾ. ೨೨ ರಂದು ದೇವ ಮತ್ತು ದೇವಿ ಎಂದು ಬಿಂಬಿತರಾದ (ಕುಂದಾ ಚೂಳೆ) ಕಾರ್ಯಕ್ರಮ ನಡೆಯಿತು.

೨೩ ರಂದು ದೇವಾಲಯದಲ್ಲಿ ಶ್ರೀ ಭದ್ರಕಾಳಿ ದೇವಿಗೆ ವಿಶೇಷ ಮಹಾಪೂಜೆ ನಡೆದು ಬೋಡ್ ನಮ್ಮೆ ಸಂಪೂರ್ಣಗೊAಡಿತು. ಬೋಡ್ ನಮ್ಮೆಯಲ್ಲಿ ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳ ದೇವ ತಕ್ಕರು, ಊರು ತಕ್ಕರು, ದೇವಾಲಯಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಗ್ರಾಮಸ್ಥರು, ಜಿಲ್ಲೆಯ ವಿವಿಧೆÀಡೆಗಳಿಂದ ಆಗಮಿಸಿದ್ದ ಭಕ್ತಜನರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದು ಶ್ರೀ ಭದ್ರಕಾಳಿ ದೇವಿಯ ಆಶೀರ್ವಾದ ಪಡೆದರು.