ಚೆಯ್ಯಂಡಾಣೆ, ಮೇ.೨೬: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಬಿಎಸ್ಎನ್ಎಲ್ ನೆಟ್ವರ್ಕ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಎಸ್ಎನ್ಎಲ್ ಕಚೇರಿಗಳು, ಟವರ್ಗಳು ನಿರ್ವಹಣೆ ಇಲ್ಲದೆ ನಿರ್ಲಕ್ಷö್ಯಕ್ಕೆ ಒಳಪಟ್ಟಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಚೇಲಾವರ ಗ್ರಾಮದಲ್ಲಿ ನೂತನವಾಗಿ ಆಳವಡಿಸಿರುವ ಬಿಎಸ್ಎನ್ಎಲ್ ಟವರ್ ಇದಕ್ಕೆ ಒಂದು ಉದಾಹರಣೆ.
ಈ ವ್ಯಾಪ್ತಿಯಲ್ಲಿ ಟವರ್ ನಿರ್ವಹಣೆ ಮಾಡಲು ಬಿಎಸ್ಎನ್ಎಲ್ ಸಿಬ್ಬಂದಿಗಳು ಇಲ್ಲ, ವಿದ್ಯುತ್ ಸ್ಥಗಿತಗೊಂಡರೆ ನೆಟ್ವರ್ಕ್ ಇರಲ್ಲ, ಕಳೆದ ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಬಳಸುವವರಿಗೆ ಇದು ಶಾಪವಾಗಿ ಪರಿಣಮಿಸಿದೆ.
ಜನೋಪಕಾರಿ ಸಂಸ್ಥೆಯಾಗಿದ್ದ ಬಿಎಸ್ಎನ್ಎಲ್ ಈ ದುಸ್ಥಿತಿಗೆ ಬಂದು ತಲುಪಿರುವುದು ವಿಷಾದಕರವೆಂದು ಚೇಲಾವರ ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೆಯ್ಯಂಡಾಣೆಯಲ್ಲಿ ಬಿಎಸ್ಎನ್ಎಲ್ ಕಚೇರಿ ಇಲ್ಲ, ಟವರ್ನ ನೆಟ್ವರ್ಕ್ ಮೇಲೆ ಅವಲಂಬಿತರಾಗಿರುವ ಸುತ್ತಮುತ್ತಲಿನ ಜನ ಇದೀಗ ಯಾವುದೇ ಸಂಪರ್ಕವಿಲ್ಲದೆ ಗೊಂದಲಕ್ಕೆ ಸಿಲುಕಿದ್ದಾರೆ.
ತಕ್ಷಣ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ನೆಟ್ವರ್ಕ್ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳೀಯರಾದ ಕುಟ್ಟನ ಶಶಿ ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿ ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ನೆಟ್ವರ್ಕ್ ಇಲ್ಲ, ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು ಏನಾದರೂ ಅನಾಹುತ ಸಂಭವಿಸಿದರೆ ಕರೆ ಮಾಡಲೂ ನೆಟ್ವರ್ಕ್ ಇರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-ಅಶ್ರಫ್