ಮಡಿಕೇರಿ, ಮೇ ೨೭: ಕೊಡಗಿನ ಪ್ರಶಾಂತ್ ವಿರಚಿತ ಹೊನ್ನಮ್ಮನ ಕನಸು ಕಾದಂಬರಿ ವಿಶ್ವ ಕನ್ನಡ ಸಮ್ಮೇಳನದ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗೆ ಭಾಜನವಾಗಿದೆ. ಚೇತನ ಪ್ರತಿಷ್ಠಾನ ಹಾಗೂ ಗೋವಾ ಕನ್ನಡಿಗರ ಒಕ್ಕೂಟ ಆಯೋಜಿಸುತ್ತಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರ್ರಶಸ್ತಿ ಪ್ರದಾನ ಮಾಡಲಾಗುವುದು. ಖ್ಯಾತ ಚಿತ್ರ ಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.