ಸಿದ್ದಾಪುರ, ಮೇ.೨೭: ಟ್ರಸ್ಟ್ ಕೂರ್ಗ್ ಕಾಫಿ ಮತ್ತು ನೆಸ್ಲೆ ಕಾಫಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಸಿದ್ದಾಪುರದ ಸೆಂಟನರಿ ಚರ್ಚ್ ಸಭಾಂಗಣದಲ್ಲಿ ಕಾಫಿ ಬೆಳೆಗಾರರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ನೆಸ್ಲೆ ಕಾಫಿ ಸಂಸ್ಥೆಯ ಮುಖ್ಯಸ್ಥರಾದ ಕರುತುರ ಸುಕುಮಾರನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೆಸ್ಲೆ ಸಂಸ್ಥೆಯು ರೈತರಿಗೆ ಹೊಸ ಬೆಳೆಗಳನ್ನು ಪರಿಚಯಿಸುತ್ತಿದ್ದು ಕಳೆದ ಕೆಲವು ವರ್ಷಗಳಿಂದ ಸಂಸ್ಥೆಗೆ ಸೇರಿದ ಜಾಗದಲ್ಲಿ ವಿವಿಧ ತಳಿಗಳ ಬಗ್ಗೆ ಮಾಹಿತಿ ನೀಡುತ್ತಿದೆ ಎಂದು ತಿಳಿಸಿದರು. ನೆಸ್ಲೆ ಕಾಫಿ ಸಂಸ್ಥೆಯು ರೈತರನ್ನು ನೇರವಾಗಿ ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಆಲಿಸಿ ಸ್ಪಂದನ ನೀಡುವ ಸಂಸ್ಥೆಯಾಗಿದೆ ಎಂದರು. ಹಾಲಿನ ವ್ಯಾಪಾರದಿಂದ ಪ್ರಾರಂಭವಾದ ಸಂಸ್ಥೆಯು ಇದೀಗ ಆಹಾರ ಪದಾರ್ಥಗಳು ಸೇರಿದಂತೆ ಕಾಫಿ ಉತ್ಪನ್ನಗಳನ್ನು ಖರೀದಿಸಿಕೊಂಡು ರೈತರಿಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದೆ ಎಂದರು. ಸಂಸ್ಥೆಯು ಇದೀಗ ೯ ಕಾರ್ಖಾನೆಗಳನ್ನು ಹೊಂದಿದೆ. ದೇಶದಾದ್ಯಂತ ಕಾಫಿ ಮಾರುಕಟ್ಟೆಯನ್ನು ಹೊಂದಿದ್ದು, ಉತ್ತಮ ರೀತಿಯಲ್ಲಿ ವ್ಯವಹಾರಗಳನ್ನು ನಡೆಸುತ್ತಾ ಬರಲಾಗುತ್ತಿದೆ ಎಂದರು.

ಟ್ರಸ್ಟ್ ಕೂರ್ಗ್ ಕಾಫಿ ಸಂಸ್ಥೆಯ ಪಾಲುದಾರರಾದ ಕೆ.ಯು. ಮಜೀದ್ ಮಾತನಾಡಿ, ಸಂಸ್ಥೆಯು ಕಾಫಿ ಖರೀದಿಸುತ್ತಾ ರೈತರಿಗೆ ಮಾರುಕಟ್ಟೆಯಲ್ಲಿ ಇರುವಂತ ಉತ್ತಮ ದರವನ್ನು ನೀಡುತ್ತಾ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದು ತಿಳಿಸಿದರು. ಅಲ್ಲದೆ ನೆಸ್ಲೆ ಕಾಫಿ ಸಂಸ್ಥೆಯೊAದಿಗೆ ಉತ್ತಮ ಬಾಂಧವ್ಯವನ್ನು ಹೊಂದಿಕೊಳ್ಳುವ ಮೂಲಕ ರೈತರ ಕಾಫಿ ಖರೀದಿಸಿ ಸಂಸ್ಥೆಗೆ ಸಹಕಾರ ನೀಡುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.

ಸಿದ್ದಾಪುರದ ಗುಹ್ಯ ಅಗಸ್ತೆö್ಯÃಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್ ವೆಂಕಟೇಶ್ ಮಾತನಾಡಿ, ಹಿಂದಿನ ಕಾಲದಲ್ಲಿ ಕಾಫಿ ಮುಕ್ತ ಮಾರುಕಟ್ಟೆ ಇರುವಂತ ಸಂದರ್ಭದಲ್ಲಿ ಟ್ರಸ್ಟ್ ಕೂರ್ಗ್ ಕಾಫಿ ಸಂಸ್ಥೆಯು ರೈತರಿಗೆ ಉತ್ತಮ ದರವನ್ನು ನೀಡುತ್ತಾ ರೈತರ ಸಮಸ್ಯೆಗೆ ಸ್ಪಂದಿಸಿದೆ ಎಂದರು. ರೈತರು ಪರಿಸರವನ್ನು ಉಳಿಸಿಕೊಳ್ಳುವ ಮೂಲಕ ತಮ್ಮ ತೋಟಗಳನ್ನು ಅಭಿವೃದ್ಧಿಪಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪರಿಸರವನ್ನು ಸಂರಕ್ಷಣೆ ಮಾಡಿದಲ್ಲಿ ಮುಂದಿನ ಪೀಳಿಗೆಗೂ ಕೂಡ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ಕಳೆದ ಮೂರು ವರ್ಷಗಳಿಂದ ಕಾಫಿಗೆ ಉತ್ತಮ ದರ ಲಭಿಸುತ್ತಿದೆ ಎಂದು ಈ ಸಂದರ್ಭ ಮಾಹಿತಿ ನೀಡಿದರು. ನೆಸ್ಲೆ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಜೇನು ನೊಣಗಳನ್ನು ಸಾಕಾಣಿಕೆ ಮಾಡಲು ಕೂಡ ಸಹಕಾರ ನೀಡುತ್ತಿದ್ದು ರೈತರು ಇದನ್ನು ಸದುಪಯೋಗಿಸಿಕೊಳ್ಳಬೇಕೆಂದರು.

ನೆಸ್ಲೆ ಕಾಫಿ ಸಂಸ್ಥೆಯ ವತಿಯಿಂದ ವಿವಿಧ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಕಾಫಿ ಬೆಳೆಗಾರರಿಗೆ ಬೋನಸ್ ಹಣದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ಎನ್.ಎಂ ಪೂವಯ್ಯ ಮತ್ತು ನಿವೃತ್ತ ಮೇಜರ್ ಜನರಲ್ ಕಾರ್ಯಪ್ಪ, ಟ್ರಸ್ಟ್ ಕೂರ್ಗ್ ಕಾಫಿ ಸಂಸ್ಥೆಯ ಪಾಲುದಾರ ಆಯುಬ್, ನೆಸ್ಲೆ ಸಂಸ್ಥೆಯ ಪ್ರಮುಖರಾದ ಮೇಘನ ಸೇರಿದಂತೆ ಎರಡು ಸಂಸ್ಥೆಗಳ ಪ್ರಮುಖರು ಹಾಜರಿದ್ದರು.

ಕೆ.ಯು. ಮಜೀದ್ ಸ್ವಾಗತಿಸಿ ವಂದಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಕಾಫಿ ಬೆಳೆಗಾರರು ಆಗಮಿಸಿದ್ದರು.