ಮಡಿಕೇರಿ, ಮೇ.೨೮: ಶನಿವಾರಸಂತೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದಿAದ ಹೊರಹೊಮ್ಮುವ ಎಫ್೨-ಹಂಡ್ಲಿ ಹಾಗೂ ಎಫ್೩-ಶನಿವಾರಸಂತೆ ಟೌನ್ ಫೀಡರ್ನಲ್ಲಿ ತಾ.೨೯ ರಂದು(ಇAದು) ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿAದ ಈ ಫೀಡರ್ನಿಂದ ಹೊರಹೊಮ್ಮುವ ಶನಿವಾರಸಂತೆ ಪಟ್ಟಣ, ತ್ಯಾಗರಾಜ ಕಾಲೋನಿ, ಗುಂಡುರಾವ್ ಬಡಾವಣೆ, ಸಂಪಿಗೆದಾಳು, ಕಿತ್ತೂರು, ಹಂಡ್ಲಿ, ಮಣಗಲಿ, ಕಿತ್ತೂರುಕೊಪ್ಪಲು, ಬೆಳ್ಳಾರಳ್ಳಿ, ಮಾದ್ರವಳ್ಳಿ, ಬಾಗೇರಿ, ಹುಲ್ಸೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸೋಮವಾರಪೇಟೆ ೬೬/೧೧ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೊಮ್ಮುವ ಎಫ್೨ ಕೊಡ್ಲಿಪೇಟೆ ಫೀಡರ್ನಲ್ಲಿ ಫೀಡರ್ ನಿರ್ವಹಣೆ ಕಾಮಗಾರಿಗಳನ್ನು ಕೈಗೊಂಡಿರುವುದರಿAದ ತಾ.೩೦ ರಂದು (ನಾಳೆ) ಬೆಳಿÀಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಅವರೆದಾಳು, ಬ್ಯಾಡಗೊಟ್ಟ, ದೊಡ್ಡಕುಂದ, ಚಿಕ್ಕಕುಂದ, ನೀರುಗುಂದ, ಬೆಸೂರು, ದೊಡ್ಡಭಂಡಾರ, ಕಟ್ಟೆಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.