ಮಡಿಕೇರಿ, ಮೇ,೨೮: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆಸುಬ್ರಹ್ಮಣ್ಯಕ್ಕೆ ಬರುವ ಯಾತ್ರಾರ್ಥಿಗಳ ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಬಿಸ್ಲೆ, ಕೂಡು ರಸ್ತೆ, ಶನಿವಾರಸಂತೆ, ಸೋಮವಾರಪೇಟೆ, ಕುಶಾಲನಗರ, ಮೈಸೂರು, ಬೆಂಗಳೂರು ಮಾರ್ಗದಲ್ಲಿ ಹೊಸ ನಾನ್ ಎಸಿ ಸ್ಲೀಪರ್ ಸಾರಿಗೆ ತಾ.೨೮ ರಿಂದ ಆರಂಭವಾಗಿದೆ.
ನಿರ್ಗಮನ ಸಮಯ ಇಂತಿದೆ : ಧರ್ಮಸ್ಥಳದಿಂದ ಬೆಳಿಗ್ಗೆ ೬.೩೦ ಗಂಟೆಗೆ ನಿರ್ಗಮನ, ಕುಕ್ಕೆ ಸುಬ್ರಹ್ಮಣ್ಯದಿಂದ ಬೆಳಗ್ಗೆ ೮ ಗಂಟೆಗೆ ನಿರ್ಗಮನ, ಬಿಸ್ಲೆಯಿಂದ ಬೆಳಿಗ್ಗೆ ೮.೫೦ ಗಂಟೆಗೆ ನಿರ್ಗಮನ, ಶನಿವಾರಸಂತೆಯಿAದ ಬೆಳಿಗ್ಗೆ ೯.೩೫ ಗಂಟೆಗೆ ನಿರ್ಗಮನ ಹಾಗೂ ಸೋಮವಾರಪೇಟೆಯಿಂದ ಬೆಳಗ್ಗೆ ೧೦.೩೦ ಗಂಟೆಗೆ ನಿರ್ಗಮನವಾಗಲಿದೆ.
ಅದೇ ಬಸ್ ಬೆಂಗಳೂರು ಕೆಂಪೇಗೌಡ ಬಸ್ಸು ನಿಲ್ದಾಣದಿಂದ ೯.೪೫ ಗಂಟೆಗೆ ನಿರ್ಗಮನಗೊಂಡು ಮೈಸೂರು, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ, ಕೂಡುರಸ್ತೆ, ಬಿಸ್ಲೆ, ಕುಕ್ಕೆಸುಬ್ರಹ್ಮಣ್ಯ ಮಾರ್ಗವಾಗಿ ಧರ್ಮಸ್ಥಳಕ್ಕೆ ಸಾರಿಗೆ ಕಾರ್ಯಾಚರಣೆ ಮಾಡಲಿದೆ.
ಪ್ರಯಾಣಿಕರು ಹತ್ತಿರದ ಬಸ್ ನಿಲ್ದಾಣ ಅಥವಾ ಟಿಕೇಟು ಕೌಂಟರ್ನಿAದ ಅಥವಾ ತಿತಿತಿ.ಞsಡಿಣಛಿ.iಟಿ ನಲ್ಲಿ ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪುತ್ತೂರು ವಿಭಾಗದ ಕ.ರಾ.ರ.ಸಾನಿ. ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಹರಿಬಾಬು ಅವರು ತಿಳಿಸಿದ್ದಾರೆ.