ಸೋಮವಾರಪೇಟೆ, ಮೇ. ೨೮: ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೇಳೂರು ಬಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನೂ ಸೇರಿಸಿ ಖಾಸಗಿ ಕ್ಲಬ್‌ನವರು ಫೆನ್ಸಿಂಗ್ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬAಧಿಸಿದAತೆ ಕಂದಾಯ ಇಲಾಖೆಯಿಂದ ಸರ್ವೆ ನಡೆಸಲಾಯಿತು.
ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರ ಸೂಚನೆಯಂತೆ ಸರ್ವೆ ಇಲಾಖೆಯಿಂದ ಬೇಳೂರು ಬಾಣೆ ಜಾಗವನ್ನು ಸಂಪೂರ್ಣವಾಗಿ ಸರ್ವೆ ಮಾಡಲಾಯಿತು. ಪ್ರವಾಸಿಗರ ಆಕರ್ಷಣೆಯ ತಾಣವಾಗಿದ್ದ ಬೇಳೂರು ಬಾಣೆಗೆ ಯಾರೂ ತೆರಳದಂತೆ ಸ್ಥಳೀಯ ಖಾಸಗಿ ಕ್ಲಬ್‌ನವರು ಸಂಪೂರ್ಣವಾಗಿ ಫೆನ್ಸಿಂಗ್ ಅಳವಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಕ್ಲಬ್ ನವರು ಸರ್ಕಾರಿ ಭೂಮಿ, ಪ್ರವಾಸೋದ್ಯಮ ಇಲಾಖೆಗೆ ಮೀಸಲಿಟ್ಟ ಜಾಗವನ್ನೂ ಒಳಗೊಂಡAತೆ ಸಂಪೂರ್ಣವಾಗಿ ಬೇಳೂರು ಬಾಣೆಗೆ ಬೇಲಿ ಹಾಕಿರುವುದನ್ನು ಪ್ರಶ್ನಿಸಿ ಬೇಳೂರು ಬಾಣೆ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ತಾಲೂಕು ತಹಶೀಲ್ದಾರ್‌ಗೆ ದೂರು ನೀಡಿದ್ದರು.
ಈ ಹಿನ್ನೆಲೆ ಬೇಳೂರು ಬಾಣೆ ಜಾಗದ ಸರ್ವೆಗೆ ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ಅದರಂತೆ ಸರ್ವೆಯರ್ ನರಸಯ್ಯ ಸೇರಿದಂತೆ ಸಿಬ್ಬಂದಿ ಸರ್ವೆ ಕಾರ್ಯ ನಡೆಸಿದರು. ತಹಶೀಲ್ದಾರ್ ಕೃಷ್ಣಮೂರ್ತಿ, ಸಮಿತಿಯ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ, ಕ್ಲಬ್ ಅಧ್ಯಕ್ಷ ಆನಂದ್ ಬಸಪ್ಪ, ನಿರ್ದೇಶಕರುಗಳು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಪ್ರವೀಣ್ ಶೆಟ್ಟಿ ಬಣದ ಕರವೇ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ನಗರಾಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಯಡೂರು ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು, ಸಮಿತಿಯ ಸದಸ್ಯರುಗಳು, ಬೇಳೂರು ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.
ವಿವಿಧ ಸರ್ವೆ ನಂಬರುಗಳ ಒಟ್ಟು ೨೯.೩೨ ಏಕ್ರೆ ಹಾಗೂ ಈಗಾಗಲೇ ಜಿಲ್ಲಾಧಿಕಾರಿಯವರ ಆದೇಶ ಸಂ. ಜಾಗ/೦೮/೨೦೧೫-೧೬ ದಿ.೦೬-೦೪-೨೦೧೬ ರಂತೆ ಪ್ರವಾಸೋದ್ಯಮ ಇಲಾಖೆಗೆ ಕಾಯ್ದಿರಿಸಲಾದ ಪೈಸಾರಿ ಸರ್ವೆ ನಂ. ೧೪೩/೨ರ ೭.೧೨ ಏಕ್ರೆ ಜಮೀನು ಮತ್ತು ಬೇಳೂರು ಮಠದ ಆಸ್ತಿಗಳು ಒಂದಕ್ಕೊAದು ಲಗತ್ತಾಗಿರುತ್ತದೆ. ಪ್ರವಾಸೋದ್ಯಮ ಇಲಾಖೆಯ ಸರ್ವೆ ನಂ. ೧೪೩.೨ರ ೭.೧೨ ಏಕ್ರೆ ಜಮೀನಿನ ಹದ್ದುಬಸ್ತು/ಗಡಿ ಗುರುತಿಸಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಿಗೆ ಅವರ ಜಾಗವನ್ನು ಹಸ್ತಾಂತರಿಸಲಾಗಿರುತ್ತದೆ. ಈ ನಡುವೆ ಬೇಳೂರು ಬಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ಮಾಡಿರುವ ಬಗ್ಗೆ, ಕಡಂಗ ಹಾಗೂ ನಕಾಶೆಯಲ್ಲಿ ಕಂಡ ದಾರಿ ಒತ್ತುವರಿ ಆಗಿರುವ ಬಗ್ಗೆ ಬೇಳೂರು ಬಾಣೆ ಹೋರಾಟ ಸಮಿತಿ ಪದಾಧಿಕಾರಿಗಳು ಆರೋಪಿಸಿದ್ದು, ವಸ್ತು ಸ್ಥಿತಿಯನ್ನು ಪರಿಶೀಲಿಸಬೇಕಿರುವುದರಿಂದ ದೂರದಾರರು, ಬೇಳೂರು ಕ್ಲಬ್ ಪ್ರತಿನಿಧಿಗಳು ಹಾಗೂ ಪ್ರವಾಸೋಧ್ಯಮ ಇಲಾಖಾ ಸಮಕ್ಷಮ ಸರ್ವೆ ಕಾರ್ಯ ನಡೆಸಲಾಗಿದೆ. ಸರ್ವೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.