*ಗೋಣಿಕೊಪ್ಪ, ಮೇ. ೨೮: ಪೊನ್ನಂಪೇಟೆ ಹಳ್ಳಿಗಟ್ಟು ಗ್ರಾಮದ ಎಂ. ಜಿ ನಗರದಲ್ಲಿ ೬೦ ರಿಂದ ೭೦ ವರ್ಷ ಇತಿಹಾಸವಿರುವ ಶ್ರೀ ಕನ್ನಂಬಾಡಿ ಅಮ್ಮ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯ ನಡೆಯಿತು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಂ. ಪಿ ಪರಮೇಶ್ ಮುಂದಾಳತ್ವದಲ್ಲಿ, ಅರ್ಚಕ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಗಣಪತಿ ಹೋಮ, ಬಿಂಬ ಶುದ್ದಿ, ಪ್ರತಿಷ್ಠಾ ಹೋಮಗಳೊಂದಿಗೆ ದೇವರ ವಿಗ್ರಹ ಪ್ರತಿಷ್ಠಾಪನೆ ಮಾಡಿ ಬ್ರಹ್ಮ ಕಲಶಾಭಿಷೇಕ ಅಲಂಕಾರ ಪೂಜೆಯನ್ನು ನೆರವೇರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ದೇವಸ್ಥಾನ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಯಾಗಿ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಕೊಳೇರ ದಯಾ ಚಂಗಪ್ಪ, ಪೊನ್ನಂಪೇಟೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಅಲೀರಾ ರಶೀದ್, ಎಂ ಜಿ ನಗರದ ಮುಖ್ಯಸ್ಥ ಎಂ. ವಿ ಚಂದ್ರ, ಪೋನ್ನಂಪೇಟೆ ಪಟ್ಟಣ ಪಂಚಾಯತಿ ಸದಸ್ಯ ರಾಮಕೃಷ್ಣ, ಮಚ್ಚಿಯಂಡ ಅಪ್ಪಯ್ಯ ಭಾಗವಹಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.