ಐಗೂರು, ಮೇ ೨೮: ಗೋಣಿಕೊಪ್ಪ ಸಮೀಪದ ದೇವರಪುರ ಗ್ರಾಮದ ಭದ್ರಕಾಳಿ ದೇವಾಲಯದಲ್ಲಿ ನಡೆಯುವ ಬೇಡುಹಬ್ಬದ ಅಂಗವಾಗಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಹಾಡಿಯ ನಿವಾಸಿಗಳ ೧೫ ಜನರ ತಂಡ ವಿಶೇಷ ವೇಷಧರಿಸಿ ಸಂಭ್ರಮಿಸಿದರು.
ತAಡದ ಸದಸ್ಯರು ಸಾಂಪ್ರದಾಯಿಕ ವಾದ್ಯಗಳೊಂದಿಗೆ ಜನಪದ ಹಾಡಿಗೆ ಹೆಜ್ಜೆ ಹಾಕುತ್ತಾ ಮನೆ ಮನೆಗೆ ತೆರಳಿ ಕಾಣಿಕೆಗಳನ್ನು ಸಂಗ್ರಹಿಸಿದರು. ಸಂಘದ ತಂಡದಲ್ಲಿದ್ದ ಕೆಲ ಪುರುಷರು ಮಹಿಳಾ ವೇಷದಲ್ಲಿ ನರ್ತಿಸಿ ಗಮನಸೆಳೆದರು. ಕುಣಿತದ ಉತ್ಸಾಹಕ್ಕೆ ಮಾರುಹೋದ ಗ್ರಾಮಸ್ಥರು ಸಹ ತಂಡದೊAದಿಗೆ ಸೇರಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.