ಹಲವರಿಗೆ ಕಚ್ಚಿದ ನಾಯಿ
ಮಡಿಕೇರಿ, ಮೇ ೨೮: ಮಡಿಕೇರಿಯ ಹಿಲ್ ರಸ್ತೆಯಲ್ಲಿ ತಾ. ೨೭ ರ ಸಂಜೆ ಮೂರು ಮಂದಿಗೆ ನಾಯಿ ಕಚ್ಚಿದ್ದು ಹುಚ್ಚು ನಾಯಿ ಇದಾಗಿರಬಹುದು ಎಂಬ ಆತಂಕ ವ್ಯಕ್ತಗೊಂಡಿದೆ.
ಮೂವರನ್ನು ಕಚ್ಚಿರುವ ನಾಯಿ ಇನ್ನಿತರ ಕೆಲವು ಬೀದಿ ನಾಯಿಗಳಿಗೂ ಕಚ್ಚಿದೆ. ನಾಯಿ ಕಡಿತದಿಂದ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಮೂಡಾ ಮಾಜಿ ಅಧ್ಯಕ್ಷ, ಸ್ಥಳೀಯ ವರ್ತಕ ಶಜೀಲ್ ಕೃಷ್ಣ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಈ ಬಗ್ಗೆ ನಗರಸಭೆಗೂ ಮಾಹಿತಿ ನೀಡಲಾಗಿದೆ. ಜನತೆಯಲ್ಲಿ ಹುಚ್ಚು ನಾಯಿಯ ಆತಂಕ ಸೃಷ್ಟಿಯಾಗಿರುವುದರಿಂದ ಭಯದ ವಾತಾವರಣ ಮೂಡಿದೆ. ನಗರಸಭೆ, ಜಿಲ್ಲಾಡಳಿತ ಈ ಬಗ್ಗೆ ತ್ವರಿತವಾಗಿ ಮುಂಜಾಗ್ರತಾ ಕ್ರಮ ಅನುಸರಿಸಿ ಶ್ವಾನ ಹಾವಳಿ ನಿಯಂತ್ರಿಸಬೇಕಿದೆ ಎಂದು ಜನತೆಯ ಪರವಾಗಿ ಅವರು ಆಗ್ರಹಿಸಿದ್ದಾರೆ.
ಹಿಲ್‌ರಸ್ತೆ, ಕಾಲೇಜು ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ನಾಯಿಗಳು ಕಂಡುಬರುತ್ತಿರುವುದರಿAದ ಆತಂಕ ಹೆಚ್ಚಾಗಿದೆ ಎಂದು ಶಜೀಲ್ ಕೃಷ್ಣ ಹೇಳಿದ್ದಾರೆ.