ಮಡಿಕೇರಿ, ಮೇ ೨೯: ಸೋಮವಾರಪೇಟೆ ೬೬/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೊಮ್ಮುವ ಎಫ್೨ ಕೊಡ್ಲಿಪೇಟೆ ಫೀಡರ್‌ನಲ್ಲಿ ಫೀಡರ್ ನಿರ್ವಹಣೆ ಕಾಮಗಾರಿಗಳನ್ನು ಕೈಗೊಂಡಿರುವುದರಿAದ ತಾ. ೩೦ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಅವರೆದಾಳು, ಬ್ಯಾಡಗೊಟ್ಟ, ದೊಡ್ಡಕುಂದ, ಚಿಕ್ಕಕುಂದ, ನೀರುಗುಂದ, ಬೆಸೂರು, ದೊಡ್ಡಭಂಡಾರ, ಕಟ್ಟೆಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಕೋರಿದ್ದಾರೆ.x