ಕಡAಗ, ಮೇ. ೨೯: ಕೊಡಗು ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್ ಮತ್ತು ಬುಲೆಟ್ ಫ್ರೆಂಡ್ಸ್ ವತಿಯಿಂದ ೧೭ನೇ ವರ್ಷದ ಕೊಡಗು ಮುಸ್ಲಿಂ ವಾಲಿಬಾಲ್ ಕಪ್ ಚಾಂಪಿಯನ್ ಪಟ್ಟವನ್ನು ಡೆಕ್ಕನ್ ನಾಪೋಕ್ಲು ಮತ್ತು ರನ್ನರ್ ಅಪ್ ಪ್ರಶಸ್ತಿಯನ್ನು ಸಿವೈಸಿ ಚಿಟ್ಟಡೆ ತಮ್ಮದಾಗಿಸಿಕೊಂಡವು.

ಕಳೆದ ನಾಲ್ಕು ದಿನಗಳಿಂದ ಕೊಂಡAಗೇರಿ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಜಿಲ್ಲೆಯ ೪೦ ತಂಡಗಳು ಭಾಗಿಯಾಗಿದ್ದವು.

ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಕೊಂಡAಗೇರಿ ಬುಲೆಟ್ ತಂಡವನ್ನು ಮಣಿಸಿ ಸಿವೈಸಿ ಚಿಟ್ಟಡೆ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತು,

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಕೊಟ್ಟಮುಡಿ ತಂಡವನ್ನು ಮಣಿಸಿ ಡೆಕ್ಕನ್ ನಾಪೋಕ್ಲು ತಂಡ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯದಲ್ಲಿ ಡೆಕ್ಕನ್ ನಾಪೋಕ್ಲು ತಂಡವು ಸಿವೈಸಿ ಚಿಟ್ಟಡೆ ತಂಡವನ್ನು ಮಣಿಸಿ ೧೭ನೇ ವರ್ಷದ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ೩ನೇ ಸ್ಥಾನವನ್ನು ಝೆಡ್‌ವೈಸಿ ಮತ್ತು ನಾಲ್ಕನೇ ಸ್ಥಾನವನ್ನು ಬುಲೆಟ್ ಫ್ರೆಂಡ್ಸ್ ಪಡೆದುಕೊಂಡವು. ಕ್ರೀಡಾಕೂಟದಲ್ಲಿ ಉತ್ತಮ ಪಾಸರ್ ಪ್ರಶಸ್ತಿಯನ್ನು ಆದು ನಾಪೋಕ್ಲು, ಲಿಬ್ರೋ ಪ್ರಶಸ್ತಿಯನ್ನು ಇರ್ಷಾ ಕೊಟ್ಟಮುಡಿ, ಎಮರ್ಜಿಂಗ್ ಪ್ರಶಸ್ತಿಯನ್ನು ರಾಶಿ ಚಿಟ್ಟಡೆ, ಆಲ್ ರೌಂಡರ್ ಪ್ರಶಸ್ತಿಯನ್ನು ಅಪ್ಪಿ ನಾಪೋಕ್ಲು,ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಫಾಝಿಲ್ ನಾಪೋಕ್ಲು ತನ್ನದಾಗಿಸಿಕೊಂಡರು.

ಕ್ರೀಡಾಕೂಟದಲ್ಲಿ ಆಯೋಜಕರನ್ನು ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ನಾಪೋಕ್ಲು, ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಹನೀಫ್ ಪಿ.ಎ. ರಫೀಕ್ ಕೊಳುಮಂಡ, ಮನ್ಸೂರ್ ಅಲಿ, ಖಲೀಲ್ ಕ್ರಿಯೇಟಿವ್, ಶಮೀರ್ ಕಡಂಗ, ಕರೀಂ ಲಿಂರಾ, ಆಪು ಕೊಂಡAಗೇರಿ ಉಪಸ್ಥಿತರಿದ್ದರು. ಕ್ರೀಡಾಕೂಟದ ಸ್ವಾಗತ ಮತ್ತು ವಂದನೆಯನ್ನು ಅಬ್ದುಲ್ ರಹಮಾನ್ ಅಂದಾಯಿ ನಿರ್ವಹಿಸಿದರು.