ಗೋಣಿಕೊಪ್ಪಲು, ಮೇ ೨೯: ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಜಾಗಲೆ ಗ್ರಾಮದ ಕೃಷಿಕ, ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅವರಿಗೆ ಸೇರಿದ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷಗೊಂಡಿದ್ದು, ನಾಗರಿಕರನ್ನು ಬೆಚ್ಚಿಬೀಳಿಸಿದೆ.
ಬಾಳೆಲೆ ಹೋಬಳಿ ನಿಟ್ಟೂರು ಜಾಗಲೆ ಗ್ರಾಮದ ಕೃಷಿಕರಾದ ಅಳಮೇಂಗಡ ಬೋಸ್ ಮಂದಣ್ಣ ಅವರು ದೊಡ್ಡ ಪ್ರಮಾಣದಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದು, ಪ್ರಗತಿಪರ ರೈತರಾಗಿದ್ದಾರೆ. ಕೃಷಿಯೊಂದಿಗೆ ಮೀನುಗಾರಿಕೆ ಯನ್ನು ರೂಢಿಸಿಕೊಂಡಿರುವ ಇವರು ತಮ್ಮ ಕೆರೆಯಲ್ಲಿ ನಾನಾ ಬಗೆಯ ಮೀನುಗಳನ್ನು ಬಿಟ್ಟಿದ್ದರು.
ಇದೀಗ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವುದರಿAದ ಸಾಕಿದ ಮೀನುಗಳನ್ನೆಲ್ಲಾ ತಿಂದು ಅಪಾರ ಪ್ರಮಾಣದ ನಷ್ಟವಾಗಿದೆ. ಅಲ್ಲದೆ ಮಾನವನ ಜೀವಕ್ಕೂ ಸಮಸ್ಯೆ ಆಗುವ ಸಂಭವವಿದೆ. ಅರಣ್ಯ ಇಲಾಖೆ ತಕ್ಷಣದಿಂದಲೇ ಮೊಸಳೆಯನ್ನು ಸ್ಥಳಾಂತರ ಮಾಡಿ ರೈತನ ನೆರವಿಗೆ ಧಾವಿಸುವಂತೆ ಬೋಸ್ ಮಂದಣ್ಣ ಮನವಿ ಮಾಡಿದ್ದಾರೆ.
೨ ಕೆರೆಯಲ್ಲಿ ೩೦ ಸಾವಿರಕ್ಕೂ ಅಧಿಕ ಮೀನು ಮರಿಗಳನ್ನು ಬಿಡಲಾಗಿತ್ತು. ದೊಡ್ಡ ಕೆರೆಯಲ್ಲಿದ್ದ ಭಾರೀ ಬೆಲೆಯ ಮೀನುಗಳನ್ನು ತಿಂದು ಹಾಕಿದ್ದು ರೂ. ೫ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿರುವುದಾಗಿ ಬೋಸ್ ಮಂದಣ್ಣ ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡರು.
ಕೆರೆಯ ಸಮೀಪದಲ್ಲಿಯೇ ಲಕ್ಷö್ಮಣತೀರ್ಥ ನದಿಯು ಹರಿಯುತ್ತಿದ್ದು ಈ ಹೊಳೆಯಿಂದ ಮೊಸಳೆಯು ಆಗಮಿಸಿರ ಬಹುದೆಂದು ಅಂದಾಜಿಸಲಾಗಿದೆ. ಆಗಿಂದ್ದಾಗಿಯೇ ಮೊಸಳೆಯು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಗೋಚರಿಸುತ್ತಿದೆ ಎನ್ನಲಾಗಿದೆ.
- ಹೆಚ್.ಕೆ. ಜಗದೀಶ್