ಮಡಿಕೇರಿ, ಮೇ ೩೧: ಗೋಣಿಕೊಪ್ಪ ಸಮೀಪದ ಅರ್ವತೊಕ್ಲು ಬಳಿಕ ಪಿಹೆಚ್‌ಎಸ್ ಕಾಲೋನಿಯಲ್ಲಿ ಗಾಳಿ ಸಹಿತ ಭಾರಿ ಮಳೆಯಿಂದಾಗಿ ಮರ ಗಳು ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತು.

ಈ ಭಾಗದಲ್ಲಿ ಮಳೆ ವ್ಯಾಪಕವಾಗಿ ಸುರಿದಿದ್ದು, ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತು. ಮರ ಬಿದ್ದ ಪರಿಣಾಮ ರಸ್ತೆ ಸಂಪರ್ಕವೂ ಕೆಲಕಾಲ ಕಡಿತಗೊಂಡಿತು. ನಂತರ ಮರವನ್ನು ಕತ್ತರಿಸಿ ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.