ಇಂಧನವು ಮಾನವ ನಾಗರಿಕತೆಯ ಅಭಿವೃದ್ಧಿಗೆ ಅವಿಭಾಜ್ಯ ಅಂಗವಾಗಿದೆ. ಪ್ರಾಚೀನ ಕಾಲದಲ್ಲಿ ಮಾನವನು ಬೆಂಕಿಯನ್ನು ಕಂಡುಹಿಡಿದ ಕ್ಷಣದಿಂದ ಇಂದಿನ ಅಂತರಿಕ್ಷ ಯುಗದವರೆಗೂ ಇಂಧನದ ಅವಶ್ಯಕತೆ ನಿರಂತರವಾಗಿ ಹೆಚ್ಚುತ್ತಿದೆ. ಕೈಗಾರಿಕರಣ, ನಗರೀಕರಣ, ಸಾರಿಗೆ, ಕೃಷಿ, ಆರೋಗ್ಯ, ಶಿಕ್ಷಣ - ಎಲ್ಲ ಕ್ಷೇತ್ರಗಳಲ್ಲೂ ಇಂಧನವೇ ಆಧಾರವಾಗಿದೆ.
ಆದರೆ ಇಂಧನದ ಅಗತ್ಯ ಹೆಚ್ಚಿದಂತೆ ಅದರ ಮೂಲಗಳ ಬಗ್ಗೆ ಆತಂಕವೂ ಹೆಚ್ಚುತ್ತಿದೆ. ಸಾಂಪ್ರದಾಯಿಕ ಇಂಧನ ಮೂಲಗಳಾದ ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲಗಳು ಸೀಮಿತವಾಗಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ.
ಇಂತಹ ಸಂದರ್ಭದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳು ಮಾನವಕುಲದ ಭವಿಷ್ಯವನ್ನು ರಕ್ಷಿಸುವ ಅತ್ಯಂತ ಮುಖ್ಯ ಆಯ್ಕೆಯಾಗಿ ಮೂಡಿಬರುತ್ತಿವೆ.
ನವೀಕರಿಸಬಹುದಾದ ಇಂಧನ ಮೂಲಗಳು ಎಂದರೆ ಪ್ರಕೃತಿಯಲ್ಲಿ ನಿರಂತರವಾಗಿ ಲಭ್ಯವಾಗುವ, ಬಳಸಿದರೂ ಮುಗಿಯದ, ಪರಿಸರ ಸ್ನೇಹಿಯಾದ ಇಂಧನ ಮೂಲಗಳು. ಇವುಗಳನ್ನು ಸಮರ್ಥವಾಗಿ ಬಳಸಿದರೆ ಇಂಧನ ಕೊರತೆ, ಪರಿಸರ ಹಾನಿ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ನವೀಕರಿಸಬಹುದಾದ ಇಂಧನ ಎಂದರೇನು?
ಪ್ರಕೃತಿಯ ಸಹಜ ಚಕ್ರಗಳಿಂದ ಪುನಃ ಪುನಃ ಉತ್ಪತ್ತಿಯಾಗುವ ಮತ್ತು ಮಾನವನ ಬಳಕೆಯಿಂದ ಕ್ಷೀಣಿಸದ ಇಂಧನ ಮೂಲಗಳನ್ನು ನವೀಕರಿಸಬಹುದಾದ ಇಂಧನ ಮೂಲಗಳು ಎಂದು ಕರೆಯಲಾಗುತ್ತದೆ. ಇವು ಸೂರ್ಯನ ಬೆಳಕು, ಗಾಳಿ, ನೀರು, ಜೀವಸಂಕುಲ, ಭೂಮಿಯ ಉಷ್ಣತೆ ಮುಂತಾದ ಪ್ರಕೃತಿ ಸಂಪನ್ಮೂಲಗಳಿAದ ದೊರೆಯುತ್ತವೆ.
ನವೀಕರಿಸಬಹುದಾದ ಇಂಧನದ ಅಗತ್ಯತೆ
ಇಂದಿನ ಯುಗದಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಮಹತ್ವ ನೀಡಬೇಕಾದ ಕಾರಣಗಳು ಅನೇಕವಾಗಿವೆ:
ಸಾಂಪ್ರದಾಯಿಕ ಇಂಧನ ಮೂಲಗಳು ಮುಗಿಯುವ ಹಂತದಲ್ಲಿವೆ, ವಾಯುಮಾಲಿನ್ಯ ಮತ್ತು ಪರಿಸರ ಹಾನಿ ಹೆಚ್ಚುತ್ತಿದೆ, ಜಾಗತಿಕ ತಾಪಮಾನ ಏರಿಕೆ (ಉಟobಚಿಟ Wಚಿಡಿmiಟಿg), ಹವಾಮಾನ ಬದಲಾವಣೆ, ಇಂಧನ ಆಮದು ಅವಲಂಬನೆ ಕಡಿಮೆ ಮಾಡುವ ಅಗತ್ಯ, ಭವಿಷ್ಯದ ಪೀಳಿಗೆಗಾಗಿ ಸಂಪನ್ಮೂಲ ಸಂರಕ್ಷಣೆ, ನವೀಕರಿಸಬಹುದಾದ ಇಂಧನ ಮೂಲಗಳ ವಿಧಗಳು
ನವೀಕರಿಸಬಹುದಾದ ಇಂಧನವನ್ನು ಮುಖ್ಯವಾಗಿ ಕೆಳಗಿನ ಪ್ರಕಾರಗಳಲ್ಲಿ ವಿಂಗಡಿಸಬಹುದು:
ಸೌರ ಇಂಧನ, ಗಾಳಿ ಇಂಧನ, ಜಲವಿದ್ಯುತ್, ಜೈವ ಇಂಧನ, ಭೂತಾಪ ಇಂಧನ, ಸಮುದ್ರ ಇಂಧನ
೧. ಸೌರ ಇಂಧನ (Soಟಚಿಡಿ ಇಟಿeಡಿgಥಿ)
ಸೂರ್ಯನು ಭೂಮಿಗೆ ಅಪಾರ ಶಕ್ತಿಯನ್ನು ನೀಡುವ ಮಹಾ ಶಕ್ತಿಯಾಗಿದೆ. ಸೂರ್ಯನ ಬೆಳಕು ಮತ್ತು ತಾಪವನ್ನು ಉಪಯೋಗಿಸಿ ಉತ್ಪಾದಿಸುವ ಇಂಧನವೇ ಸೌರ ಇಂಧನ.
ಸೌರ ಇಂಧನದ ಕಾರ್ಯವಿಧಾನ
ಸೌರ ಫಲಕಗಳು (Soಟಚಿಡಿ Pಚಿಟಿeಟs) ಸೂರ್ಯನ ಬೆಳಕನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತವೆ. ಇದರಲ್ಲಿ ಫೋಟೋವೋಲ್ಟಾಯಿಕ್ ಕೋಶಗಳು ಮುಖ್ಯ ಪಾತ್ರ ವಹಿಸುತ್ತವೆ.
ಸೌರ ಇಂಧನದ ಉಪಯೋಗಗಳು
ಮನೆಗಳಿಗೆ ವಿದ್ಯುತ್ ಉತ್ಪಾದನೆ, ಬೀದಿ ದೀಪಗಳು, ನೀರು ಬಿಸಿ ಮಾಡುವ ಯಂತ್ರಗಳು, ಕೃಷಿಯಲ್ಲಿ ನೀರಾವರಿ, ಸೌರ ಕುಕ್ಕರ್ಗಳು
ಲಾಭಗಳು
ಮಾಲಿನ್ಯರಹಿತ, ಶಾಶ್ವತ ಶಕ್ತಿಸ್ರೋತ, ಇಂಧನ ವೆಚ್ಚ ಕಡಿಮೆ, ದೂರದ ಪ್ರದೇಶಗಳಿಗೆ ಉಪಯುಕ್ತ
ಅಪಾಯಗಳು
ಪ್ರಾರಂಭಿಕ ವೆಚ್ಚ ಹೆಚ್ಚು, ಮೋಡದ ದಿನಗಳಲ್ಲಿ ಕಡಿಮೆ ಉತ್ಪಾದನೆ
೨. ಗಾಳಿ ಇಂಧನ (Wiಟಿಜ ಇಟಿeಡಿgಥಿ)
ಗಾಳಿಯ ಚಲನೆಯಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಗಾಳಿ ಇಂಧನ ಎಂದು ಕರೆಯಲಾಗುತ್ತದೆ. ಗಾಳಿಯ ಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ.
ಗಾಳಿ ಇಂಧನದ ಕಾರ್ಯವಿಧಾನ
ಗಾಳಿಯ ವೇಗದಿಂದ ಟರ್ಬೈನ್ಗಳು ತಿರುಗಿ ವಿದ್ಯುತ್ ಉತ್ಪಾದನೆ ಆಗುತ್ತದೆ.
ಉಪಯೋಗಗಳು
ವಿದ್ಯುತ್ ಉತ್ಪಾದನೆ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ
ಲಾಭಗಳು
ಶುದ್ಧ ಇಂಧನ, ನಿರಂತರ ಲಭ್ಯತೆ, ಇಂಧನ ಆಮದು ಅವಲಂಬನೆ ಕಡಿಮೆ
ಅಪಾಯಗಳು
ಗಾಳಿಯ ಲಭ್ಯತೆ ಮೇಲೆ ಅವಲಂಬನೆ, ಶಬ್ದ ಮಾಲಿನ್ಯ
೩. ಜಲವಿದ್ಯುತ್ (ಊಥಿಜಡಿoಠಿoತಿeಡಿ)
ನದಿಗಳ ಹರಿವಿನಿಂದ ಉತ್ಪತ್ತಿಯಾಗುವ ಶಕ್ತಿಯೇ ಜಲವಿದ್ಯುತ್. ಅಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ.
ಲಾಭಗಳು
ದೊಡ್ಡ ಪ್ರಮಾಣದ ವಿದ್ಯುತ್ ಉತ್ಪಾದನೆ, ಕಡಿಮೆ ನಿರ್ವಹಣಾ ವೆಚ್ಚ
ಅಪಾಯಗಳು
ಪರಿಸರ ಹಾನಿ, ಸ್ಥಳೀಯ ಜನರ ಸ್ಥಳಾಂತರ
೪. ಜೈವ ಇಂಧನ (ಃiomಚಿss ಇಟಿeಡಿgಥಿ)
ಸಸ್ಯಗಳು, ಪಶುಮಲ, ಕೃಷಿ ತ್ಯಾಜ್ಯಗಳಿಂದ ಉತ್ಪತ್ತಿಯಾಗುವ ಶಕ್ತಿಯೇ ಜೈವ ಇಂಧನ.
ಉಪಯೋಗಗಳು
ಜೈವ ಅನಿಲ, ಜೈವ ಡೀಸೆಲ್, ಅಡುಗೆ ಇಂಧನ, ಲಾಭಗಳು, ತ್ಯಾಜ್ಯ ನಿರ್ವಹಣೆ, ಗ್ರಾಮೀಣ ಉದ್ಯೋಗ ಸೃಷ್ಟಿ
೫. ಭೂತಾಪ ಇಂಧನ (ಉeoಣheಡಿmಚಿಟ ಇಟಿeಡಿgಥಿ)
ಭೂಮಿಯ ಒಳಗಿನ ಉಷ್ಣತೆಯಿಂದ ದೊರೆಯುವ ಶಕ್ತಿಯೇ ಭೂತಾಪ ಇಂಧನ.
ಲಾಭಗಳು
ನಿರAತರ ಶಕ್ತಿ, ಕಡಿಮೆ ಮಾಲಿನ್ಯ
೬. ಸಮುದ್ರ ಇಂಧನ (ಔಛಿeಚಿಟಿ ಇಟಿeಡಿgಥಿ)
ಸಮುದ್ರ ಅಲೆಗಳು, ಜ್ವಾರಭಾತಗಳಿಂದ ಉತ್ಪಾದಿಸುವ ಶಕ್ತಿ ಸಮುದ್ರ ಇಂಧನ.
ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಸ್ಥಿತಿ ಭಾರತವು ಸೌರ ಮತ್ತು ಗಾಳಿ ಇಂಧನದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಸರ್ಕಾರದ ವಿವಿಧ ಯೋಜನೆಗಳು ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುತ್ತಿವೆ.
ನವೀಕರಿಸಬಹುದಾದ ಇಂಧನದ ಭವಿಷ್ಯ
ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನವೇ ಜಗತ್ತಿನ ಮುಖ್ಯ ಇಂಧನ ಮೂಲವಾಗಲಿದೆ. ತಂತ್ರಜ್ಞಾನ ಅಭಿವೃದ್ಧಿಯಿಂದ ವೆಚ್ಚ ಕಡಿಮೆಯಾಗುತ್ತಿದ್ದು, ಬಳಕೆ ಹೆಚ್ಚುತ್ತಿದೆ.
ನವೀಕರಿಸಬಹುದಾದ ಇಂಧನ ಮೂಲಗಳು ಮಾನವಕುಲದ ಭವಿಷ್ಯವನ್ನು ಬೆಳಗಿಸುವ ಶಕ್ತಿಗಳಾಗಿವೆ. ಪರಿಸರ ರಕ್ಷಣೆ, ಆರ್ಥಿಕ ಅಭಿವೃದ್ಧಿ ಮತ್ತು ಇಂಧನ ಭದ್ರತೆಗಾಗಿ ಇವುಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ.
ಪ್ರತಿಯೊಬ್ಬ ನಾಗರಿಕನು ನವೀಕರಿಸಬಹುದಾದ ಇಂಧನ ಬಳಕೆಗೆ ಕೈಜೋಡಿಸಿದಾಗ ಮಾತ್ರ ಶಾಶ್ವತ ಅಭಿವೃದ್ಧಿ ಸಾಧ್ಯ. - ತೇಜಸ್ವಿನಿ ಗುಡಂಜಿರಾ, ಗುಮ್ಮನಕೊಲ್ಲಿ.