*ಗೋಣಿಕೊಪ್ಪ, ಮೇ ೩೧: ಸರ್ಕಾರ ತನ್ನ ಕಳೆದ ಬಜೆಟ್‌ನಲ್ಲಿ ರಾಜ್ಯದ ೧೩ ಆದಿವಾಸಿ ಸಮುದಾಯಗಳ ವಿದ್ಯಾವಂತರಿಗೆ ನೇರ ನೇಮಕಾತಿ ಮಾಡುವುದಾಗಿ ಘೋಷಿಸಿದ್ದರೂ, ಇದುವರೆಗೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿ ಕೊಡಗು ಆದಿವಾಸಿ ಎಜುಕೇಷನ್ ಯೂತ್ ಫೌಂಡೇಶನ್ ವತಿಯಿಂದ ಅಪರ ಜಿಲ್ಲಾಧಿಕಾರಿ ಡಾ. ಸಹನಾ ಎಸ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭ ಮಾತನಾಡಿದ ಯರವ ಸಮಾಜದ ಅಧ್ಯಕ್ಷ ಸಿದ್ದಪ್ಪ ಪಿ.ಕೆ., ಸರ್ಕಾರ ಘೋಷಿಸಿದ ಯೋಜನೆ ಶೀಘ್ರ ಜಾರಿಗೆ ಬಂದು, ಆದಿವಾಸಿ ಸಮುದಾಯದ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಮುದಾಯದ ಯುವಕರು ಶಿಕ್ಷಣ ಪಡೆದಿದ್ದರೂ ಉದ್ಯೋಗಾವಕಾಶಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಯರವ ಸಮಾಜದ ತುಳಸಿ ಜೆ. ಆರ್, ಪುಷ್ಪರಾಜ್ ವೈ.ಆರ್, ಕೊಡಗು ಅದಿವಾಸಿ ಎಜುಕೇಷನ್ ಯೂತ್ ಪೌಂಡೇಶನ್ ಭೋಜಪ್ಪ, ನೇತ್ರ, ಬೋಪಿತ, ವಕೀಲೆ ತುಳಸಿ ಜೆ.ಆರ್. ಇದ್ದರು.