ವರದಿ : ಪುತ್ತರಿರ ಕರುಣ್ ಕಾಳಯ್ಯ

ಚೆಟ್ಟಳ್ಳಿ, ಮೇ ೩೧: ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಆತಂಕದ ನಡುವೆ ಇರಾನಿಗೆ ತೆರಳಲಾಗದೆ ಹಲವು ತಿಂಗಳುಗಳಿAದ ಕೊಡಗಿನಲ್ಲಿಯೇ ಉಳಿದಿದ್ದ ಕೊಡಗಿನ ನವೀನ ಹಾಗೂ ನಾದರ್ ದಂಪತಿ ಕಳೆದ ವಾರ ಸುರಕ್ಷಿತವಾಗಿ ಇರಾನ್ ತಲುಪಿದ್ದಾರೆ. ಕಳೆದ ೪೦ ವರ್ಷಗಳ ಹಿಂದೆ ವಾಯುಪಡೆಯ ನಿವೃತ್ತ ಸೇನಾಧಿಕಾರಿ ಕೊಡಗಿನ ಬಿದ್ದಂಡ ದಿ. ಬೋಪಣ್ಣ ಅವರ ಪುತ್ರಿ ನವೀನ ಹಾಗೂ ಇರಾನ್ ಪ್ರಜೆ ನಾದರ್ ವಿವಾಹವಾಗಿದ್ದರು. ಅವರು ತಮ್ಮ ಈರ್ವರು ಮಕ್ಕಳೊಂದಿಗೆ ಇರಾನಿನಲ್ಲಿ ನೆಲೆಸಿದ್ದರು.

ಪ್ರತೀವರ್ಷ ನವೀನ ತನ್ನ ಪತಿ ನಾದರ್ ಅವರೊಂದಿಗೆ ತನ್ನ ಹುಟ್ಟೂರಾದ ಮೂರ್ನಾಡಿನ ಕಾಂತೂರಿನಲ್ಲಿ ಬಂದು ತಮ್ಮ ಕುಟುಂಬದೊAದಿಗೆ ಕಾಲಕಳೆದು, ಕೆಲ ದಿನಗಳು ತಂಗಿ ತೆರಳುತ್ತಿದ್ದರು. ಪ್ರತಿವರ್ಷದಂತೆ ಈ ಬಾರಿಯೂ ಕೊಡಗಿಗೆ ಬಂದ ಸಂರ್ಭದಲ್ಲಿ ಯುದ್ಧದ ಕಾರಣದಿಂದ ಇರಾನ್‌ಗೆ ತೆರಳಲಾಗದೇ ಕೊಡಗಿನಲ್ಲೆ ಉಳಿಯುವ ಪರಿಸ್ಥಿತಿ ತಲೆದೋರಿತ್ತು. ಹಲವು ಬಾರಿ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿದರೂ ಸೂಕ್ತ ಸ್ಪಂದನ ದೊರೆತಿರಲಿಲ್ಲ.

ಯುದ್ಧದ ತೀವ್ರತೆ ಹೆಚ್ಚಾಗುವ ಮನ್ಸೂಚನೆ, ವಿಮಾನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ದಂಪತಿ ಬೆಂಗಳೂರಿನಿAದ ಓಮನ್ ಮೂಲಕ ಇರಾನ್‌ಗೆ ಪ್ರಯಾಣ ಬೆಳೆಸಿ ತಮ್ಮ ನಿವಾಸವಾದ ಬೋಜ್‌ನೂರ್ ಪ್ರದೇಶವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಐದು ತಿಂಗಳುಗಳಿAದ ಕುಟುಂಬದಿAದ ದೂರವಾಗಿದ್ದ ದಂಪತಿ ಇದೀಗ ಮಕ್ಕಳ ಹಾಗೂ ಮೊಮ್ಮಕ್ಕಳೊಂದಿಗೆ ಸೇರಿ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳ ಹಿಂದೆ ತಮ್ಮ ಮೊಮ್ಮಗಳ ಹುಟ್ಟುಹಬ್ಬವನ್ನು ಕುಟುಂಬದ ಎಲ್ಲ ಸದಸ್ಯರು ಸೇರಿ ಸಂಭ್ರಮದಿAದ ಆಚರಿಸಿದ್ದು, ಹಲವು ತಿಂಗಳ ಬಳಿಕ ಒಂದಾದ ಸಂತಸದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಇದೀಗ ಇರಾನಿನಲ್ಲಿ ಆಪಲ್ ಫಸಲಿನ ಸಮಯವಾಗಿರುವ ಹಿನ್ನೆಲೆಯಲ್ಲಿ ತಮ್ಮ ತೋಟದಲ್ಲಿ ದಂಪತಿ ಕಾಲ ಕಳೆಯುತ್ತಿದ್ದಾರೆ.

ಹಲವು ತಿಂಗಳ ಆತಂಕದ ಬಳಿಕ ಕುಟುಂಬದೊAದಿಗೆ ಮತ್ತೆ ಸೇರಿರುವುದು ಹಾಗೂ ನಮ್ಮ ತೋಟದಲ್ಲಿ ಬೆಳೆದ ಹಣ್ಣು ಗಳನ್ನು ನೋಡುವುದು ಅಪಾರ ಸಂತೋಷ ತಂದಿದೆ ಎಂದು ನವೀನ ಹಾಗೂ ನಾದರ್ ದಂಪತಿ ತಮ್ಮ ಸಂತಸ ಹಂಚಿಕೊAಡಿದ್ದಾರೆ.