ನಾಪೋಕ್ಲು, ಮೇ ೩೧: ಕರ್ನಾಟಕ ರಾಜ್ಯ ತೋಟಗಾರಿಕೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾಗಿ ಕೊಡಗಿನ ಚೆರುವಾಳಂಡ ರಂಜನಾ ಮಾಚಯ್ಯ ಬಡ್ತಿ ಹೊಂದಿದ್ದಾರೆ.

ಇವರು ಇತ್ತೀಚೆಗೆ ಡೆಪ್ಯೂಟಿ ಡೈರೆಕ್ಟರ್ ಆಫ್ ಹಾರ್ಟಿಕಲ್ಚರ್ (ಯೋಜನೆ) ಆಗಿ ಕಾರ್ಯನಿರ್ವಹಿಸಿದ್ದರು. ಇವರು ನಾಪೋಕ್ಲು ನಿವಾಸಿ ಬೊಪ್ಪಂಡ ಕುಶಾಲಪ್ಪ ಮತ್ತು ಜಾನಕಿ ಅವರ ಪುತ್ರಿ. ಹಾಗೂ ಚೆರುವಾಳಂಡ ಪವನ್ ಮಾಚಯ್ಯ ಅವರ ಪತ್ನಿ.