ಸಿದ್ದಾಪುರ, ಜೂ. ೧: ಸಾಂಬಾರಿನ ವಿಚಾರದಲ್ಲಿ ಅಳಿಯ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೊಸೂರು ಗ್ರಾಮದಲ್ಲಿ ನಡೆದಿದೆ.
ಹೊಸೂರು ಗ್ರಾಮದ ಎಸ್. ಮಾಚಯ್ಯ ಎಂಬವರ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡಿರುವ ಕಾರ್ಮಿಕ ಕೃಷ್ಣ ಎಂಬಾತ ತನ್ನ ಪತ್ನಿ ಸುನೀತಳೊಂದಿಗೆ ಸಾಂಬಾರಿನ ವಿಚಾರದಲ್ಲಿ ಕಲಹ ನಡೆಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಸುನೀತಳ ತಾಯಿ ಗಂಗಮ್ಮ ವಿಚಾರಿಸಲು ತೆರಳಿದಾಗ ಅಳಿಯ ಕೃಷ್ಣ ಗಂಗಮ್ಮ ಅವರಿಗೆ ಸೌದೆಯಿಂದ ಕೈ ಹಾಗೂ ಕಾಲಿಗೆ ಹೊಡೆದು ಗಾಯಗೊಳಿಸಿ ಬೆದರಿಕೆ ಒಡ್ಡಿರುತ್ತಾನೆ ಎಂದು ಕೃಷ್ಣನ ಪತ್ನಿ ಸುನೀತ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಕೃಷ್ಣನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಾಯಾಳು ಗಂಗಮ್ಮ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.