ಕೂಡಿಗೆ, ಜೂ.೧: ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಾಲಾ ನೌಕರ ರಘು, ಶಾಲಾ ವ್ಯವಸ್ಥಾಪಕರಾದ ಮಂಡೆಪAಡ ಬೋಸ್ ಮೊಣ್ಣಪ್ಪ ಅವರಿಗೆ ಹಾಗೂ ಕ್ರೀಡಾ ಸೇರಿದಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲಾ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆÀ ಸನ್ಮಾನ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಮಂಡೆಪAಡ ಬೋಸ್ ಮೊಣ್ಣಪ್ಪ ವಹಿಸಿದ್ದರು. ಶಾಲೆಯ ಗ್ರೂಪ್ ಡಿ. ನೌಕರರಾದ ಹೆಚ್.ಆರ್ ರಘು, ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಶರಾವತಿ ಹಾಗೂ ಪೋಷಕರಿಗೆ ಮತ್ತು ಕರ್ನಾಟಕ ರಾಜ್ಯ ಮಟ್ಟದ ಕಾಯಕಯೋಗಿ ರತ್ನ ಪ್ರಶಸ್ತಿ ವಿಜೇತರಾದ ಮಂಡೆಪAಡ ಬೋಸ್ ಮೊಣ್ಣಪ್ಪ ಅವರಿಗೆ, ಕ್ರೀಡೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಶಾಲಾ ವಿದ್ಯಾರ್ಥಿಗಳಾದ ಪ್ರಜೇಶ್, ಮಣಿಕಂಠ, ಮುರಳಿ ಹಾಗೂ ತರಬೇತುದಾರರಾಗಿರುವ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ.ಪಿ ಅಪ್ಪಣ್ಣ, ಕೆ.ಸಿ ದೇವಯ್ಯ, ಅರುಣ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಎನ್ ಪುಷ್ಪ, ಹಳೆಯ ವಿದ್ಯಾರ್ಥಿ ಚರಣ್, ಶಿಕ್ಷಕರಾದ ಎ.ಪಿ. ಸೋಮಯ್ಯ, ಎಂ.ಎಸ್ ಕುಸುಮ, ಟಿ.ಎಸ್ ಕಾಂತರಾಜ್, ಹೇಮಮಾಲಿನಿ, ಪ್ರತಾಪ್, ರೂಪಕಲಾ, ಗಣೇಶ್, ಕುಮಾರ್, ದೀಪಕ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪುಷ್ಪ ಅವರು ಸ್ವಾಗತಿಸಿ, ಎ.ಪಿ. ಸೋಮಯ್ಯ ವಂದಿಸಿದರು.