ಗುಡ್ಡೆಹೊಸೂರು, ಜೂ. ೧೮: ಇಲ್ಲಿಗೆ ಸಮೀಪದ ಗುಡ್ಡೆಹೊಸೂರು ಗ್ರಾಮದೇವರುಗಳಾದ ಬಸವೇಶ್ವರ, ಚೌಡೇಶ್ವರಿ ಹಾಗೂ ಗುಳಿಗ ದೇವರ ಪುನರ್ ಪ್ರತಿಷ್ಠ ಬ್ರಹ್ಮಕುಂಭಾಭಿಷೇಕ ಹಾಗೂ ಹಲವು ಧಾರ್ಮಿಕ ವಿಧಿಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಚೌಡೇಶ್ವರಿ ದೇವರ ಶಿಖರ ಪ್ರತಿಷ್ಠೆ ಹಾಗೂ ಮಹಾ ಕುಂಭಾಭಿಷೇಕ, ಕರ್ಕಾಟಕ ಲಗ್ನದಲ್ಲಿ ಶ್ರೀ ಬಸವೇಶ್ವರ ಹಾಗೂ ಗುಳಿಗ ದೇವರ ಪುನರ್ ಪ್ರತಿಷ್ಠೆ ಮಹಾಪೂಜೆ ನೆರವೇರಿತು. ಧಾರ್ಮಿಕ ಮಹೋತ್ಸವದಲ್ಲಿ ವೀರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ಕೂಡ ಅಂತರAಗದ ನೆಮ್ಮದಿಗೆ ದೇವತಾ ಪೂಜೋತ್ಸವಗಳು ಮುಖ್ಯ ಪಾತ್ರವಹಿಸುತ್ತವೆ. ಮುಂದುವರೆದ ವಿಜ್ಞಾನ ಅನೇಕ ಅನುಕೂಲಗಳನ್ನು ನೀಡಿದರೂ ಕೂಡ ಮನುಷ್ಯನ ಮಾನಸಿಕ ನೆಮ್ಮದಿಗೆ ಭಜನೆ, ಸತ್ಸಂಗ, ದೇವಾಲಯಗಳಿಂದ ಮಾತ್ರ ಸಾಧ್ಯ. ಹಾಗಾಗಿ ಭಾರತೀಯ ಪೂರ್ವಜರು ದೇಶವನ್ನೇ ದೇವಾಲಯವಾಗಿಸಿಕೊಂಡು ಧಾರ್ಮಿಕ ಆಚರಣೆಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು ಎಂದರು.
ಅರಮೇರಿ ಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ದೇವಾಲಯವಾದ ಭಾರತ ದೇಶದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದರೂ ಕೂಡ ಮನುಷ್ಯನ ಅಂತರAಗದ ಸಂತಸವನ್ನು ದೈವಿಕ ಆಚರಣೆಗಳು ಹೆಚ್ಚಿಸುತ್ತವೆ ಎಂದರು.
ಉದ್ಯಮಿ ಎಸ್ಎಲ್ಎನ್ ವಿಶ್ವನಾಥನ್, ವೆಂಕಿ ವಿಶ್ವನಾಥ್, ಕೊಡಗು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಕಾರ್ಯದರ್ಶಿ ಶಾಂಭಶಿವಯ್ಯ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ದೇವಾಲಯ ಸಮಿತಿ ಅಧ್ಯಕ್ಷ ಬಿ.ಟಿ.ಮಲ್ಲಿಕಾರ್ಜುನ, ಕಾರ್ಯದರ್ಶಿ ಸಂತೋಷ, ಉಪಾಧ್ಯಕ್ಷ ದಾದಪ್ಪ, ಬಸವೇಶ್ವರ ದೇವಾಲಯದ ಅರ್ಚಕ ಶಿವಕುಮಾರ್, ಚೌಡೇಶ್ವರಿ ದೇವಾಲಯದ ಅರ್ಚಕ ಅಣ್ಣು ಪೂಜಾರಿ, ನಟರಾಜು, ಮೋಹನ್ ಇದ್ದರು.