ಸೋಮವಾರಪೇಟೆ, ಜೂ. ೧೮: ಬಸವಣ್ಣ ಅವರ ತತ್ವಾದರ್ಶಗಳು ಸಾರ್ವಕಾಲಿಕ ಸತ್ಯವಾಗಿದ್ದು, ಅವರ ತತ್ವಗಳ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಸಿದ್ದಲಿಂಗಪುರ ಶ್ರೀ ಮಂಜುನಾಥ ದೇವಾಲಯದ ಪ್ರದಾನ ಗುರುಗಳಾದ ಶ್ರೀ ರಾಜೇಶ್‌ನಾಥ್‌ಜೀ ಹೇಳಿದರು.

ಇಲ್ಲಿನ ವಿರಕ್ತ ಮಠದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ವಿರಕ್ತ ಮಠಾಧೀಶರು, ಅಖಂಡ ಭಾರತ ಸನಾತನ ಸಂತ ಸಮಿತಿಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಶ್ರೀ ನಿಶ್ಚಲ ನಿರಂಜನ ದೇಶೀ ಕೇಂದ್ರ ಸ್ವಾಮೀಜಿಗಳ ಜನ್ಮ ವಧÀðಂತಿ ಮಹೋತ್ಸವದಲ್ಲಿ ಭಾಗಿಯಾಗಿ ಆಶೀರ್ವಚನ ನೀಡಿದರು.

ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಬಸವಣ್ಣ ಅವರು ಜಾತಿ, ವರ್ಗಗಳನ್ನು ಮೀರಿದವರು. ಕೇವಲ ಒಂದು ಸಮುದಾಯಕ್ಕೆ ಸೀಮಿತರಾÀದೇ ಇಡೀ ಸಮಾಜದ ಒಳಿತಿಗೆ ಶ್ರಮಿಸಿದ ದಾರ್ಶನಿಕ. ಅವರ ವಿಚಾರಧಾರೆಗಳನ್ನು ಪ್ರಸ್ತುತಪಡಿಸಲು ಮಠಮಾನ್ಯಗಳು ಮುಂದಾಗಬೇಕು ಎಂದರು.

ಇAದು ವೀರಶೈವ ಸಮಾಜವನ್ನು ವಿಂಗಡಿಸುವ ಯತ್ನಗಳು ನಡೆಯುತ್ತಿರುವುದು ಸರಿಯಲ್ಲ. ಒಗ್ಗಟ್ಟಿನಿಂದ ಮಾತ್ರ ಸಮಾಜ ಶಕ್ತಿಯುತವಾಗುತ್ತವೆ ಎಂದು ಅಭಿಪ್ರಾಯಿಸಿದರು. ದೇಶೀಕೇಂದ್ರ ಶ್ರೀಗಳು ಕೇವಲ ಸೋಮವಾರಪೇಟೆ ವಿರಕ್ತ ಮಠಕ್ಕೆ ಮಾತ್ರ ಸೀಮಿತರಾಗಿಲ್ಲ. ಸಂತ ಸಮಾಜದ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ಸ್ವೀಕರಿಸುವ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ನಿಶ್ಚಲ ನಿರಂಜನ ದೇಶೀಕೇಂದ್ರ ಶ್ರೀಗಳು ಮಾತನಾಡಿ, ಕಳೆದ ೩ ವರ್ಷಗಳ ಹಿಂದೆ ಶ್ರೀಮಠಕ್ಕೆ ಆಗಮಿಸಿ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಹುಟ್ಟು ಹಬ್ಬಾಚರಣೆಗಳು ನಮ್ಮ ಜವಾಬ್ದಾರಿಯನ್ನು ಇಮ್ಮಡಿಗೊಳಿಸುತ್ತವೆ. ಈ ನಿಟ್ಟಿನಲ್ಲಿ ಮಠಕ್ಕೆ ಸಮಾಜದ ಸಹಕಾರವೂ ಅಗತ್ಯ ಎಂದರು.

ಸೋಮವಾರಪೇಟೆ ವೀರಶೈವ ಸಮಾಜ, ಅರಸಿನಕುಪ್ಪೆಯ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ದೇವಾಲಯ, ಬೇಳೂರು ಮಠದ ವತಿಯಿಂದ ಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವೀರಶೈವ ಸಮಾಜದ ಯಜಮಾನ ಬಿ.ಪಿ.ಶಿವಕುಮಾರ್, ಶೆಟ್ರು ಮೃತ್ಯುಂಜಯ, ಪ್ರಮುಖರಾದ ಸನತ್, ಶಶಿಕುಮಾರ್, ಕುಶಾಲನಗರದ ಉದ್ಯಮಿ ಸುಗುರಾಜ್, ಅಭಿಷೇಕ್ ಗೋವಿಂದಪ್ಪ, ಗುರುಪ್ರಸಾದ್, ಸಚಿನ್, ಅರುಣ್, ಸುರೇಶ್ ಸೇರಿದಂತೆ ಇತರರು ಇದ್ದರು.