ಮಡಿಕೇರಿ, ಜೂ. ೧೯: ರಕ್ಷಣಾ ಮಂತ್ರಾಲಯದ ಡೈರೆಕ್ಟರೇಟ್ ಜನರಲ್ ಆಫ್ ರಿಸೆಟಲ್ಮೆಂಟ್ ಅವರು ಕೋಲ್ ಇಂಡಿಯಾ ಲಿಮಿಟೆಡ್ನವರೊಂದಿಗೆ ಮಾಜಿ ಸೈನಿಕರ ಕಲ್ಲಿದ್ದಲು ಸಾರಿಗೆ ಸಂಸ್ಥೆಗಳಲ್ಲಿ ಮೃತ ಮಾಜಿ ಸೈನಿಕರ ಪತ್ನಿಯರು, ಅನಾಥ ಮಕ್ಕಳು ಹಾಗೂ ಗಾಯಗೊಂಡ ಮಾಜಿ ಸೈನಿಕರಿಗೆ ಆರ್ಥಿಕ ನೆರವು ನೀಡಲು ಒಂದು ಬಾರಿ ಮೊತ್ತವನ್ನು ಪಾವತಿಸಿದಲ್ಲಿ ಪ್ರತಿ ತಿಂಗಳು ಐದು ವರ್ಷಗಳವರೆಗೆ ನಿಶ್ಚಿತ ಮೊತ್ತವನ್ನು ನೀಡಲಾಗುತ್ತದೆ. ನೋಂದಣಿಯಾಗುವಾಗ ನೀಡಿದ್ದ ನಿಶ್ಚಿತ ಮೊತ್ತವನ್ನು ಐದು ವರ್ಷಗಳ ನಂತರ ಸಂಪೂರ್ಣವಾಗಿ ಹಿಂದಿರುಗಿಸಲಾಗುತ್ತದೆ. ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಡಿಜಿಆರ್ ವೆಬ್ಸೈಟ್ ತಿತಿತಿ.ಜgಡಿiಟಿಜiಚಿ.gov.iಟಿ ನಲ್ಲಿ ತಾ. ೨೦ ರ ನಂತರ ಹೆಸರು ನೋಂದಣಿಯಾಗಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.