ಚೆಯ್ಯಂಡಾಣೆ, ಜೂ. ೧೯: ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶಾಲೆಯ ಸ್ಥಳ ದಾನಿಗಳಾದ ಬಿದ್ದೇರಿಯಂಡ ಕಾವೇರಪ್ಪ ಹಾಗೂ ಸುಶೀಲ ಕಾವೇರಪ್ಪ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿದರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ, ಅತಿಥಿ ಶಿಕ್ಷಕಿ ಫಸೀಲ, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.