ಮಡಿಕೇರಿ, ಜೂ. ೧೯: ಪೊನ್ನಂಪೇಟೆ ತಾಲೂಕಿನ ಮಾಪಿಳೆತೋಡು ಭಾಗಕ್ಕೆ ಭೇಟಿ ನೀಡಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಮಾಪಿಳೆತೋಡುವಿನಿಂದ ಹುದಿಕೇರಿಗೆ ತೆರಳುವ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದರು.
ಸುಮಾರು ೨.೮೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷ ಟಾಟು ಮೊಣ್ಣಪ್ಪ, ವಲಯ ಅಧ್ಯಕ್ಷ ಚಂಗುಲAಡ ಸೂರಜ್, ಹಿರಿಯರಾದ ಮೂಕಳೇರ ಕುಶಾಲಪ್ಪ, ತೀತೀರ ಮಂದಣ್ಣ, ಸಾದಲಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಂಡ ಧ್ಯಾನ್ ದೇವಯ್ಯ, ಕೊಣಿಯಂಡ ಸೋಮಣ್ಣ, ಪಕ್ಷದ ಮುಖಂಡರು ಮಚ್ಚಾಮಾಡ ಮನು, ಅಣ್ಣಳಮಾಡ ಹರೀಶ್, ರವಿ, ಗಿರೀಶ್, ಅಜ್ಜಿಕುಟ್ಟಿರ ಪೊನ್ನಪ್ಪ, ಅಜ್ಜಿಕುಟ್ಟಿರ ಗಿರೀಶ್, ಕೇಚಮಾಡ ಸಿದ್ದು ನಾಚಪ್ಪ, ಕುಂಡಚ್ಚಿರ ಮಂಜು ದೇವಯ್ಯ, ತಾಣಚ್ಚಿರ ನಿಖಿಲ್ ಸೋಮಣ್ಣ, ಮದನ್ ಮಂದಣ್ಣ, ರಿಕ್ಷಿತ್ ಕಾರ್ಯಪ್ಪ, ಬಿಪಿನ್, ವಚನ್ ನಾಚಪ್ಪ, ಪ್ರಮುಖರು ಉಪಸ್ಥಿತರಿದ್ದರು.